ಅಂತರಾಷ್ಟ್ರೀಯ

ಲೈಂಗಿಕತೆ ಮೇಲೆ ಪರಿಣಾಮ ಬೀರಲಿದೆ ಜಾಗತಿಕ ತಾಪಮಾನ ಏರಿಕೆ ! ಇದನ್ನು ಓದಿ…

Pinterest LinkedIn Tumblr

pp

ಲಂಡನ್: ನೀವು ಜಾಗತಿಕ ತಾಪಮಾನವನ್ನು ಇನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ಅದು ನೀವು ಊಹಿಸಿದ್ದಕ್ಕಿಂತಲೂ ನಿಮ್ಮ ಜೀವನಕ್ಕೆ ಹೆಚ್ಚು ಹಾನಿ ಉಂಟುಮಾಡುತ್ತಿದೆ.

ನೂತನ ಸಂಶೋಧನೆಯೊಂದರ ಪ್ರಕಾರ ತಾಪಮಾನ ಹೆಚ್ಚಿದಂತೆ ಸಂಭೋಗದ ಆವರ್ತನ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ತಿಳಿಸಿದೆ ಎಂದು ದ ಇಂಡಿಪೆಂಡೆಂಟ್ ಪತ್ರಿಕೆ ತಿಳಿಸಿದೆ.

ಹೆಚ್ಚು ತಾಪಮಾನದ ದಿನದ ನಂತರದ ಒಂಭತ್ತು ತಿಂಗಳುಗಳಲ್ಲಿ ಜನನ ಅನುಪಾತ ತಣ್ಣಗಿನ ದಿನಕ್ಕಿಂತಲೂ ೦.೭ ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಇದು ತಿಳಿಸಿವುದೇನೆಂದರೆ ಹೆಚ್ಚಿನ ತಾಪಮಾನದ ದಿನಗಳಲ್ಲಿ ಅಂಡಾಣು-ವೀರ್ಯಾಣು ಫಲವತ್ತತೆ ಕಡಿಮೆಯಾಗುತ್ತದೆ ಅಥವಾ ಸಂಭೋಗದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಅಥವಾ ಎರಡು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವೈಪರೀತ್ಯ ತಾಪಮಾನದಿಂದ ಜನನದ ಸಂಖ್ಯೆಯಲ್ಲಿ ಇಳಿಮುಖವಾಗುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ಅದು ಸಂಭೋಗ ಅನುಪಾತದ ಇಳಿಮುಖಕ್ಕೂ ಕಾರಣ ಎಂದಿದ್ದಾರೆ.

Write A Comment