ಅಂತರಾಷ್ಟ್ರೀಯ

ಮಹಿಳೆಯರೇ ಜಾಗ್ರತೆ ! ಹೆಚ್ಚು ಸೋಪು, ಶಾಂಪೂ ಬಳಸುದರಿಂದ ಗರ್ಭಪಾತ ಆಗುತ್ತಂತೆ!

Pinterest LinkedIn Tumblr

Group of pregnant women in waiting room

ಎಲ್ಲಿಯ ಸೋಪು, ಎಲ್ಲಿಯ ಪ್ರೆಗ್ನೆನ್ಸಿ? ಒಂದಕ್ಕೊಂದು ಲಿಂಕೇ ಇಲ್ಲ ಅಂತಂದ್ಕೊಂಡಿದ್ದೀವಿ. ಭರ್ಜರಿ ಲಿಂಕ್ ಇದೆ. ಆದ್ರೆ, ಇದು ಭಯ ಹುಟ್ಟಿಸುವ ಲಿಂಕ್! ಮಹಿಳೆಯರು ಮೈಗೆ ಅತಿಯಾದ ಸೋಪು, ಶಾಂಪೂ ಬಳಸಿದ್ರೆ ಗರ್ಭಪಾತ ಆಗುತ್ತಂತೆ! ಬೀಜಿಂಗ್‍ನ ಪೀಕಿಂಗ್ ಯುನಿವರ್ಸಿಟಿ ಈ ಆತಂಕಕಾರಿ ಸಂಶೋಧನೆಯನ್ನು ತೆರೆದಿಟ್ಟಿದೆ.

ಹೊಸದಾಗಿ ಗರ್ಭ ಧರಿಸಿದ 300 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಅವರಿಗೆ ಅಗತ್ಯಕ್ಕಿಂತ ಹೆಚ್ಚು ಸೋಪು, ಶಾಂಪೂ ಬಳಸಲು ಸೂಚಿಸಲಾಗಿತ್ತು. 5 ವಾರದ ನಂತರ ಅವರ ಮೂತ್ರ ಪರೀಕ್ಷೆ ಮಾಡಿದಾಗ 132 ಮಹಿಳೆಯರು ಗರ್ಭಪಾತಕ್ಕೀಡಾಗಿದ್ದರು. ಅನೇಕರು ತಜ್ಞರ ಮಾತನ್ನು ಉಲ್ಲಂಘಿಸಿ ಕಡಿಮೆ ಸೋಪು- ಶಾಂಪೂ ಬಳಸಿ, ಬಚಾವಾದರಂತೆ.

ಇವುಗಳಲ್ಲಿರುವ `ಫ್ತಾಲೇಟ್’ ಅಂಶ ದೇಹವನ್ನು ಆಂತರಿಕವಾಗಿಯೂ ಡ್ರೈ ಮಾಡುತ್ತದಂತೆ. ಈ ಸೋಪು, ಶಾಂಪೂಗಳನ್ನು ಮಾರುಕಟ್ಟೆಗೆ ಬಿಡುವ ಮುನ್ನ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಆದರೆ, ಕೆಲವು ಕಂಪನಿಗಳು ಇಂಥ ಪರೀಕ್ಷೆ ನಡೆಸದೆ ನೇರವಾಗಿ ಮಾರುಕಟ್ಟೆಗೆ ಬಿಡುವುದೇ ಈ ಸ್ಥಿತಿಗೆ ಕಾರಣವಾಯಿತು ಅಂತಾರೆ ಪೀಕಿಂಗ್ ತಜ್ಞರು.

Write A Comment