ರಾಷ್ಟ್ರೀಯ

ಸಂಸದರಿಗೆ ಪ್ರತಿ ತಿಂಗಳು 2.8ಲಕ್ಷ ವೇತನ, ಭತ್ಯೆ

Pinterest LinkedIn Tumblr

Parliament

ನವದೆಹಲಿ,ಸೆ.30: 543 ಲೋಕಸಭಾ ಸದಸ್ಯರಿಗೆ ಸಂಬಳ ಹಾಗೂ ಮತ್ತಿತರೆ ಭ್ಯತೆಗಳ ಹಿನ್ನೆಲೆ ಕಳೆದ ವರ್ಷ ಭಾರತ 176ಕೋಟಿ ರೂ.ಗಳನ್ನು ಭರಿಸಿದ್ದು, ಓರ್ವ ಸಂಸದನಿಗೆ ಪ್ರತಿ ತಿಂಗಳು 2.7ಲಕ್ಷ ರೂ.ಗಳನ್ನು ನೀಡುತ್ತಿದೆ ಎಂದು ವರದಿ ತಿಳಿಸಿದೆ.

ಸಂಸದರಿಗೆ ಮಾಸಿಕ 50 ಸಾವಿರ ರೂ. ಸಂಬಳ, 45 ಸಾವಿರ ರೂ. ವಿಧಾನಸಭಾ ಭತ್ಯೆ, 15 ಸಾವಿರ ರೂ. ಕಚೇರಿ ನಿರ್ವಹಣೆಗೆ ಮತ್ತು ಕಾರ್ಯದಶಿಗೆ 30 ಸಾವಿರ ರೂ. ನೀಡಲಾಗುತ್ತದೆ. ಸಂಸತ್ ಕಲಾಪವಿದ್ದಾಗ ಪ್ರತಿ ದಿನ 2 ಸಾವಿರ ರೂ. ಭತ್ಯೆ ನೀಡಲಾಗುತ್ತದೆ. 34ಬಾರಿ ವಿಮಾನ ಪ್ರಯಾಣ ಹಾಗೂ ಮಿತಿ ಇರದ ರೈಲು ಮತ್ತು ಬಸ್ ಪ್ರಯಾಣದ ಸೌಲಭ್ಯಗಳು ಸಂಸದರಿಗಿದೆ.

ಉಚಿತ ಮನೆ, ಮಿತಿ ಇಲ್ಲದ ನೀರಿನ ಬಳಕೆ ಸೌಲಭ್ಯ, ವಿದ್ಯುತ್, ಟೆಲಿಫೋನ್ ಸೌಲಭ್ಯ ಮತು ಉಚಿತ ಚಿಕಿತ್ಸೆಯ ಸೌಕರ್ಯವೂ ಸಂಸದರಿಗಿದೆ.

ಸಂಸದರು ವಿನಾಕಾರಣ ಪ್ರಯಾಣ ವೆಚ್ಚ ಭತ್ಯೆಗೆ ಅರ್ಜಿ ಹಾಕಿದ್ದಾರೆ. ಸಂಸದರಿಗೆ ಹೆಚ್ಚಿನ ಪ್ರಯಾಣದ ಅಗತ್ಯವಿಲ್ಲ. ಇದನ್ನು ಸರ್ಕಾರ ಪರಿಶೀಲಿಸಬೇಕಿದೆ. ಕಚೇರಿ ಸಿಬ್ಬಂದಿಗಳಿಗೆ ತಮ್ಮ ಸ್ವಂತ ಹಣದಲ್ಲಿ ಸಂಬಳ ನೀಡಲಿ, ಅಗತ್ಯವಿದ್ದ ಪಕ್ಷದಲ್ಲಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಕಾನೂನು ಜಾರಿಗೆ ತರಬೇಕೆಂಬುದು ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯವಾಗಿದೆ

Write A Comment