ರಾಷ್ಟ್ರೀಯ

ಅಜ್ಮೀರ್ ದರ್ಗಾಕ್ಕೆ ಬಾಂಬ್ ಬೆದರಿಕೆ: ಆವರಣ ಸಂಪೂರ್ಣ ತೆರವು

Pinterest LinkedIn Tumblr

ajmer-finalಅಜ್ಮೀರ್, ಸೆ.21: ಅಜ್ಮೀರ್ ದರ್ಗಾದಲ್ಲಿ ಬಾಂಬ್ ಇಡಲಾಗಿದೆಯೆಂಬ ಸುಳ್ಳು ದೂರವಾಣಿ ಕರೆಯು ಸೋಮವಾರ ಮುಂಜಾನೆ ಬಂದಿದೆ.
ತಕ್ಷಣವೇ ಪೊಲೀಸರು ದರ್ಗಾದಿಂದ ಜನರನ್ನು ತೆರವುಗೊಳಿಸಿದರು. ಸುಮಾರು 2 ತಾಸುಗಳ ಕಾಲ ಅವರು, ಪ್ರದೇಶದ ತಪಾಸಣೆ ನಡೆಸಿದರು. ಕರೆ ಬಂದಾಗ ದರ್ಗಾದ ಆವರಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರಿದ್ದರು.
ಪೊಲೀಸರಿಗೆ ವಾರಸುದಾರರಿಲ್ಲದ ಬ್ಯಾಗೊಂದು ದೊರಕಿತಾದರೂ, ಅದರೊಳಗೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.
ಅಜ್ಞಾತ ವಸ್ತುವೊಂದರ ಸಂಬಂಧ ತಮಗೆ ಸುಳ್ಳು ಕರೆಯೊಂದು ಬಂದಿತ್ತು. ತಾವು ಇಡೀ ಆವರಣದೊಳಗೆ ಶೋಧ ನಡೆಸಿದೆವು. ಆದರೆ, ಯಾವುದೂ ಅಸಹಜವಾದುದು ಕಂಡು ಬಂದಿಲ್ಲವೆಂದು ಅಜ್ಮೀರ್‌ನ ಪೊಲೀಸ್ ಅಧೀಕ್ಷಕ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಈಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದೆ.

Write A Comment