ರಾಷ್ಟ್ರೀಯ

ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಭಾರತ-ಪಾಕ್ ನಿರ್ಧಾರ

Pinterest LinkedIn Tumblr

pak.jpg-fiಜಮ್ಮು, ಸೆ.21: ಭಾರತ ಮತ್ತು ಪಾಕಿಸ್ತಾನಗಳಿಂದು ಸಂಯಮವನ್ನು ಪ್ರದರ್ಶಿಸಲು ಹಾಗೂ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ಒಪ್ಪಿಕೊಂಡಿವೆ. ಉಭಯ ದೇಶಗಳ ಹಿರಿಯ ಸೇನಾಧಿಕಾರಿಗಳು ಜಮ್ಮು-ಕಾಶ್ಮೀರದ ಪೂಂಚ್ ವಲಯದಲ್ಲಿ ನಡೆಸಿದ ಧ್ವಜ ಸಭೆಯೊಂದರಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ. ಪೂಂಚ್ ವಲಯವು ಪಾಕಿಸ್ತಾನದಿಂದ ಅತಿ ಹೆಚ್ಚು ಕದನವಿರಾಮ ಉಲ್ಲಂಘನೆಗಳಿಗೆ ಸಾಕ್ಷಿಯಾಗಿದೆ.
ಪೂಂಚ್ ವಲಯದ ಚಕನ್-ದಾ-ಬಾಗ್ ಎಲ್‌ಒಸಿ ದಾಟು ಕೇಂದ್ರದಲ್ಲಿ ಪೂರ್ವಾಹ್ನ 11:30ಕ್ಕೆ ಬ್ರಿಗೇಡ್ ಕಮಾಂಡರ್‌ಗಳ ಮಟ್ಟದ ಧ್ವಜ ಸಭೆ ನಡೆಯಿತೆಂದು ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಎನ್.ಆಚಾರ್ಯ ತಿಳಿಸಿದ್ದಾರೆ.
ಎಲ್‌ಒಸಿಯಲ್ಲಿ ಮುಂದುವರಿದಿರುವ ಕದನ ವಿರಾಮ ಉಲ್ಲಂಘನೆ, ನಾಗರಿಕರನ್ನು ಗುರಿಯಿರಿಸುವುದು ಹಾಗೂ ಗೂಢಚರ್ಯೆ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಅನೇಕ ವಿವಾದಗಳನ್ನು ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಬಗೆಹರಿಸಿಕೊಂಡರೆಂದು ಅವರು ಹೇಳಿದ್ದಾರೆ.
ಸಂಯಮ ಪ್ರದರ್ಶನದ ಪ್ರಾಮುಖ್ಯವನ್ನು ಉಭಯ ಪಕ್ಷಗಳೂ ಅರ್ಥ ಮಾಡಿಕೊಂಡವು ಹಾಗೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಿದವೆಂದು ಆಚಾರ್ಯ ಹೇಳಿದ್ದಾರೆ.
ಸಂಯಮ ಪ್ರದರ್ಶನದ ಪ್ರಾಮುಖ್ಯವನ್ನು ಉಭಯ ಪಕ್ಷಗಳೂ ಅರ್ಥ ಮಾಡಿಕೊಂಡೆವು ಹಾಗೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಿದವೆಂದು ಆಚಾರ್ಯ ತಿಳಿಸಿದ್ದಾರೆ. ಸಭೆಯು ಒಂದು ತಾಸಿನ ಕಾಲ ನಡೆಯಿತು. ಭಾರತವನ್ನು ಬ್ರಿಗೇಡಿಯರ್ ಎಚ್.ಎಸ್.ಸರೀನ್ ಪ್ರತಿನಿಧಿಸಿದ್ದರೆ ಪಾಕಿಸ್ತಾನದ ಕಡೆಯ ನೇತೃತ್ವವನ್ನು ಬ್ರಿಗೇಡಿಯರ್ ಉಸ್ಮಾನ್ ವಹಿಸಿದ್ದರು.
ಪಾಕಿಸ್ತಾನ ಪಡೆಗಳಿಂದ ಪೂಂಚ್ ಜಿಲ್ಲೆಯ ಎಲ್‌ಒಸಿಯಲ್ಲಿ ಸುಮಾರು 20 ದಿನಗಳ ಕಾಲ ಭಾರೀ ಗುಂಡು ದಾಳಿ, 120 ಎಂಎಂ, 82 ಎಂಎಂ ಹಾಗೂ 61 ಎಂಎಂ ಮೋರ್ಟಾರ್ ಬಾಂಬ್ ದಾಳಿ ಸ್ವಯಂಚಾಲಿತ ಬಂದೂಕು ದಾಳಿಗಳು ನಡೆದ ಬಳಿಕ ನಡೆಯುತ್ತಿರುವ ಮೊದಲ ಬ್ರಿಗೇಡಿಯರ್ ಮಟ್ಟದ ಧ್ವಜ ಸಭೆ ಇದಾಗಿದೆ.

Write A Comment