ರಾಷ್ಟ್ರೀಯ

ಷೆಲ್ಟರ್ ಹೋಂ ನಿಂದ ಸಿನಿಮಾ ಸ್ಟೈಲಲ್ಲೇ ಪ್ರೇಯಸಿರನ್ನು ಎತ್ಹಾಕಂಡ್ಹೋದ ಬಾಯ್ ಫ್ರೆಂಡ್ಸ್ ..!

Pinterest LinkedIn Tumblr

boyಮಥುರಾ, ಸೆ.19-ನಾರಿನಿಕೇತನ್ (ಸರ್ಕಾರಿ ಷೆಲ್ಟರ್ ಹೋಮ್)ನಲ್ಲಿದ್ದ ತಮ್ಮ ಪ್ರೇಯಸಿಯರ ಬಿಡುಗಡೆಗಾಗಿ ಬಾಲಿವುಡ್ ಸಿನಿಮಾ ಮಾದರಿಯಲ್ಲಿ ಗನ್ ಹಿಡಿದು ಬೈಕ್ ಮೇಲೆ ಬಂದ ವ್ಯಕ್ತಿಗಳಿಬ್ಬರು, ವಾರ್ಡನ್ ಮೇಲೆ ಹಲ್ಲೆ ಮಾಡಿ ಅವರ ಲವರ್‌ಗಳನ್ನು ಕರೆದುಕೊಂಡು ಜತೆಗೇ ಅಲ್ಲಿದ್ದ ಯುವತಿಯರನ್ನೆಲ್ಲ ಬಿಡುಗಡೆ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶ ಮಥುರಾದ ಹೊರವಲಯದ ಸರ್ಕಾರದ ಮಹಿಳಾ ಆಶ್ರಯಮಂದಿರದಲ್ಲಿ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಷೆಲ್ಟರ್ ಹೋಮ್‌ಗೆ ನುಗ್ಗಿದ ವ್ಯಕ್ತಿಗಳಿಬ್ಬರು, ಅವರ ಲವರ್‌ಗಳನ್ನು ಬಿಡಿಸಿಕೊಂಡು ಅಲ್ಲಿದ್ದ ಇತರ 17 ಮಂದಿ ಮಹಿಳೆಯರನ್ನೂ ಬಿಡುಗಡೆ ಮಾಡಿ ತಪ್ಪಿಸಿಕೊಂಡಿದ್ದಾರೆ.

ಒಂದೇ ಕ್ಷಣದಲ್ಲಿ ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆಯಿಂದ ಅವಾಕ್ಕಾದ ಸುತ್ತಮುತ್ತಲಿನ ಜನ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು 17 ಜನ ಯುವತಿಯರನ್ನು ರಕ್ಷಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಇಬ್ಬರು ಅಪರಿಚಿತರು ಹಾಗೂ ಇಬ್ಬರು ಯುವತಿಯರು ಪತ್ತೆಯಾಗಿಲ್ಲ. ಈ ನಾಲ್ವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಷೆಲ್ಟರ್ ಹೋಮ್‌ನಲ್ಲಿದ್ದ ಯುವತಿಯರಿಬ್ಬರನ್ನು ಇವರು ಪ್ರೀತಿಸುತ್ತಿದ್ದರು. ಆದರೆ ಅವರು ಷೆಲ್ಟರ್ ಹೋಂನಿಂದ  ಹೊರ ಬರುವಂತಿರಲಿಲ್ಲ. ಅದಕ್ಕಾಗಿ ಈ ನಾಟಕ ಆಡಿದ ವ್ಯಕ್ತಿಗಳು ತಮ್ಮ ಪ್ರೇಯಸಿಯರನ್ನು ಕರೆದೊಯ್ದಿದ್ದಾರೆ. ಆದರೆ ಉಳಿದವರಿಗೆ ಈ ಬಿಡುಗಡೆ ಅನಿರೀಕ್ಷಿತವಾಗಿದ್ದರಿಂದ ಅವರು ಬೇರೆ ಕಡೆ ಹೋಗಲು ಸಾಧ್ಯವಾಗದ ಕಾರಣ ಷೆಲ್ಟರ್ ಹೋಮ್ ಸಮೀಪ ಅಲ್ಲಲ್ಲೇ ಆಶ್ರಯ ಪಡೆದಿದ್ದು ಎಲ್ಲರೂ ಸಿಕ್ಕಿದ್ದಾರೆ. ಹಲ್ಲೆಗೊಳಗಾದ ವಾರ್ಡನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರಿ ಸೇವೆಗೆ ಅಡ್ಡಿ, ಅತಿಕ್ರಮ ಪ್ರವೇಶ, ಈ ಅಪಹರಣ ಸೇರಿದಂತೆ ವ್ಯಕ್ತಿಗಳಿಬ್ಬರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದು ತನಿಖೆ ಮುಂದುವರೆದಿದೆ ಎಂದು ಕೊತ್ವಾಲ ಠಾಣೆ ಇನ್ಸ್‌ಪೆಕ್ಟರ್ ಚಂದ್ರಭಾನ್ ಸಿಂಗ್ ತಿಳಿಸಿದ್ದಾರೆ.

Write A Comment