ರಾಷ್ಟ್ರೀಯ

ರಾಬರ್ಟ್ ವಾದ್ರಾಗೆ ಮುಖಭಂಗ: ತಪಾಸಣೆ ರಹಿತ ಪ್ರಯಾಣಿಕರ ಪಟ್ಟಿಯಂದ ವಾದ್ರಾ ಔಟ್

Pinterest LinkedIn Tumblr

robert-vadraನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಹೆಸರನ್ನು ತಪಾಸಣೆ ರಹಿತ ಪ್ರಯಾಣಿಕರ ಪಟ್ಟಿಯಿಂದ ಕೇಂದ್ರ ಸರ್ಕಾರ ತೆಗೆದು ಹಾಕಿ, ವಿವಿಐಪಿ ಸೌಲಭ್ಯದ ವಿನಾಯಿತಿಯನ್ನು ತೆಗೆದು ಹಾಕಿದೆ. ದೇಶದ ಎಲ್ಲಾ ಏರ್ ಪೋರ್ಟ್ ಗಳಲ್ಲಿಯೂ ಇನು ಮುಂದೆ ರಾಬರ್ಟ್ ವಾದ್ರಾ ತಪಾಸಣೆ ಕಡ್ಡಾಯವಾಗಿಲಿದೆ.

ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂದು ವಿವಿಐಪಿ ಗಳ ಪಟ್ಟಿಯಿಂದ ರಾಬರ್ಟ್ ವಾದ್ರಾ ಹೆಸರನ್ನು ಕೈ ಬಿಡಲಾಗಿದೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿಯೂ ಇನ್ನು ಮುಂದೆ ವಾದ್ರಾ ಅವರನ್ನು ತಪಾಸಣೆಗೊಳಪಡಿಸ ಬಹುದಾಗಿದೆ.

ಕೇಂದ್ರ ಸರ್ಕಾರ ವಿವಿಐಪಿಗಳ ಪಟ್ಟಿಯಿಂದ ರಾಬರ್ಟ್ ವಾದ್ರಾ ಹೆಸರನ್ನು ಕೈ ಬಿಡಬೇಕು ಎಂದು ಕೆಲ ತಿಂಗಳುಗಳ ಹಿಂದೆ ವಿಮಾನಯಾನ ಸಚಿವಾಲಯಕ್ಕೆ ತಿಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವಾದ್ರಾ, ಸರ್ಕಾರ ಧ್ವಂಧ್ವ ನಿಲುವು ಅನುಸರಿಸುತ್ತಿದೆ. ಒಮ್ಮೆ ವಿವಿಐಪಿ ಪಟ್ಟಿಯಿಂದ ತನ್ನ ಹೆಸರನ್ನು ಕೈ ಬಿಡುತ್ತದೆ ಮತ್ತೆ ಸೇರಿಸುತ್ತದೆ. ತಮೆಗ ಯಾವುದೇ ವಿಶೇಷ ಸೌಲಭ್ಯ ಬೇಕಾಗಿಲ್ಲ ಎಂದು ಕಿಡಿ ಕಾರಿದ್ದರು.

Write A Comment