ಅಂತರಾಷ್ಟ್ರೀಯ

ಅಫ್ಘಾನ್ ನಿರಾಶ್ರಿತರ ಶಿಕ್ಷಕಿಗೆ ವಿಶ್ವಸಂಸ್ಥೆ ಬಹುಮಾನ

Pinterest LinkedIn Tumblr

1aqeela-asifiವಿಶ್ವಸಂಸ್ಥೆ, ಸೆ.16: ಅಫ್ಘಾನ್ ನಿರಾಶ್ರಿತರಿಗೆ ಶಿಕ್ಷಕಿಯಾಗಿರುವ ಅಕೀಲಾ ಆಸಿಫಿಯವರಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನಿರಾಶ್ರಿತರ ಘಟಕ (ಯುಎನ್‌ಎಚ್‌ಸಿಆರ್) ಕೊಡಮಾಡುವ ವಿಶೇಷ ಪ್ರಶಸ್ತಿ ಲಭಿಸಿದೆ.

ಪಾಕಿಸ್ತಾನದಲ್ಲಿ ಅಫ್ಘಾನ್ ನಿರಾಶ್ರಿತ ಬಾಲಕಿಯರಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕಿಯ ಸಮರ್ಪಣಾಭಾವವನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಘಟಕವು ಪರಿಗಣಿಸಿಈ ಪ್ರಶಸ್ತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಅಕೀಲಾ ಆಸಿಫಿಯವರು ಕನಿಷ್ಠ 1,000 ನಿರಾಶ್ರಿತ ಬಾಲಕಿಯರಿಗೆ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಒದಗಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದನ್ನು ತಾಲಿಬಾನ್ ನಿರ್ಬಂಧಿಸಿದೆ. ಅಫ್ಘಾನಿಸ್ತಾನದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಬಾಲಕಿಯರಿಗೆ ಪ್ರಾಥಮಿಕ ಶಿಕ್ಷಣ ಪಡೆಯುವುದಕ್ಕೂ ಅವಕಾಶ ನೀಡಲಾಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ.

Write A Comment