ಅಂತರಾಷ್ಟ್ರೀಯ

ಬಿಗ್ ಬಾಸ್ 9 ಸೀಸನ್ ಗೆ ನೀಲಿ ಚಿತ್ರ ನಟಿ ಮಿಯಾ ಖಲಿಫಾ ಬರಲ್ವಂತೆ ! ಆಕೆ ಭಾರತಕ್ಕೆ ಕಾಲಿಡಲ್ಲ ಎಂದದ್ದು ಏಕೆ ? ಇಲ್ಲಿದೆ ನೋಡಿ…

Pinterest LinkedIn Tumblr

miya khalifa

ಮಾಜಿ ನೀಲಿ ಚಿತ್ರ ನಟಿ ಸನ್ನಿ ಲಿಯೋನ್ ಬಿಗ್ ಬಾಸ್ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದು, ಇದೇ ಹಾದಿಯಲ್ಲಿ ಮತ್ತೊಬ್ಬ ಪೋರ್ನ್ ಸ್ಟಾರ್ ಮಿಯಾ ಖಲಿಫಾ ಎಂಬ ಅಮೆರಿಕನ್ ಅರಬ್ ಬೆಡಗಿ ಬಿಗ್ ಬಾಸ್ ಗೆ ಎಂಟ್ರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಮಿಯಾ ಖಲಿಫಾ ನಾನೆಂದು ಭಾರತಕ್ಕೆ ಕಾಲಿಡಲ್ಲ. ಹೀಗಿರುವ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಐದನೇ ಸೀಸನ್ ಸನ್ನಿ ಲಿಯೋನ್ ಬಿಗ್ ಬಾಸ್ ಎಂಟ್ರಿ ಕೊಟ್ಟಿದ್ದರು. ಆ ಮೂಲಕ ಬಾಲಿವುಡ್ ನಲ್ಲಿ ಈಗ ಭದ್ರವಾಗಿ ನೆಲೆಯೂರಿದ್ದಾಳೆ. ಈಗ, ಮಿಯಾ ಖಲಿಫಾ ಬಿಗ್ ಬಾಸ್ ನಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. 9ನೇ ಸೀಸನ್’ನ ಬಿಗ್ ಬಾಸ್’ಗೆ ಪಾಲ್ಗೊಳ್ಳಲು ಈಕೆಗೆ ಆಫರ್ ನೀಡಲಾಗಿದೆ ಎಂದು ಹೇಳಲಾಗಿತ್ತು.

ಲೆಬನಾನ್ ಮೂಲದ ಮಿಯಾ ಖಲೀಫಾ ಪೋರ್ನ್ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿದ್ದಾಳೆ. ಪೋರ್ನ್ ಹಬ್ ವೆಬ್ ಸೈಟ್ ನಲ್ಲಿ ಜನರು ಹೆಚ್ಚು ಸರ್ಜ್ ಮಾಡುವ ಹೆಸರೆಂದರೆ ಈಕೆಯದ್ದೇ. ತನ್ನ ಮಾದಕ ಮೈಮಾಟ ಮತ್ತು ವೈಯಾರದಿಂದ ವೀಕ್ಷಕರನ್ನು ಮೋಡಿ ಮಾಡಬಲ್ಲ ಚತುರೆ.

ಸಲ್ಮಾನ್ ಖಾನ್ ನಡೆಸಿಕೊಡಲಿರುವ ಬಿಗ್ ಬಾಸ್-9ರಲ್ಲಿ ರಾಧೇ ಮಾ ಮೊದಲಾದ ವಿವಾದಾತ್ಮಕ ಜನರು ಪಾಲ್ಗೊಳ್ಳಬಹುದು ಎಂಬ ಸುದ್ದಿ ಇದೆ. ಇವೆಲ್ಲವೂ ನಿಜವೇ ಆದಲ್ಲಿ ಬಿಗ್ ಬಾಸ್ ನಲ್ಲಿ ನಡೆಯುವ ಹೈಡ್ರಾಮಾ ವೀಕ್ಷಕರ ಪಾಲಿಗೆ ಭರಪೂರ ಮನರಂಜನೆ ಒದಗಿಸುವುದರಲ್ಲಿ ಸಂಶಯವೇ ಇಲ್ಲ ಬಿಡಿ.

Write A Comment