ಬೀಜಿಂಗ್: ವೃದ್ಧರೆಂದರೆ ಅವರನ್ನು ನೋಡಿಕೊಳ್ಳಲು ಯಾರಾದರೂ ಬೇಕಾಗುತ್ತದೆ. ವೃದ್ಧರು ಸದಾ ಇನ್ನೊಬ್ಬರಿಗೆ ಅವಲಂಬಿತರಾಗಿರುತ್ತಾರೆ. ಆದರೆ ಚೀನಾದಲ್ಲಿ ಒಬ್ಬ ವೃದ್ಧೆ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಮರ ಹತ್ತುತ್ತಾರೆ.
ಹೌದು. 97ರ ಅಜ್ಜಿ ಮರ ಹತ್ತಲು ಸಾಧ್ಯವೇ ಎಂದು ಎನಿಸುವುದುಂಟು!. ಆದರೆ ಚೀನಾದ ಬೀಜಿಂಗ್ ಮೂಲದ ವೃದ್ಧೆ ಹಣ್ಣು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದು, ಅದಕ್ಕಾಗಿ ಸ್ವತಃ ಅವರೇ ಮರಹತ್ತಿ ನೆರೆದವರನ್ನು ಆಕರ್ಷಿಸಿ ಹಣ್ಣಿನ ವ್ಯಾಪಾರ ಮಾಡುತ್ತಾರೆ.
ಅಜ್ಜಿ ಮರ ಹತ್ತುವುದನ್ನು ನೋಡಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕುತ್ತಿಗೆಗೆ ಒಂದು ಬಟ್ಟೆ ಕಟ್ಟಿಕೊಂಡು ಸೂಪರ್‍ಹೀರೋ ರೀತಿಯಲ್ಲಿ ಅಜ್ಜಿ ಮರ ಹತ್ತುತ್ತಾರೆ. ಅದೇ ಉತ್ಸಾಹದಿಂದ ಮರದಿಂದ ಇಳಿಯುತ್ತಾರೆ. ಸದ್ಯ ಅಜ್ಜಿ ಮರ ಹತ್ತುವ ವಿಡಿಯೋ ಯೂಟ್ಯೂಬ್‍ನಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
https://youtu.be/EodbxBRmUDs
