ರಾಷ್ಟ್ರೀಯ

ಬಿಹಾರ: ಚೌಕಾಸಿಗೆ ಇಳಿದ ಮಾಂಝಿ

Pinterest LinkedIn Tumblr

jethan-manjhiನವದೆಹಲಿ (ಪಿಟಿಐ/ಐಎಎನ್‌ಎಸ್‌): ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ್ತಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಹಿಂದೂಸ್ತಾನ್‌ ಅವಾಮ್‌ ಮೋರ್ಚಾ ನಾಯಕ, ಮಾಜಿ ಮುಖ್ಯಮಂತ್ರಿ ಜೀತನ್‌ರಾಂ ಮಾಂಝಿ ಪಟ್ಟುಹಿಡಿದಿದ್ದು, ಎನ್‌ಡಿಎ ಮೈತ್ರಿಕೂಟದ ಸ್ಥಾನ ಹೊಂದಾಣಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬಗೊಂಡಿದೆ.

ಮೂಲಗಳ ಪ್ರಕಾರ ಬಿಜೆಪಿಯು 162 ಸ್ಥಾನಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿತು. ಪಾಸ್ವಾನ್‌ ಅವರ ಎಲ್‌ಜೆಪಿಗೆ 41 ಕ್ಷೇತ್ರ, ಕುಶ್ವಾಹ ಅವರ  ಆರ್‌ಎಲ್‌ಎಸ್‌ಪಿಗೆ 25, ಮಾಂಝಿ ಅವರ ಹಿಂದೂಸ್ತಾನ್‌ ಆವಾಮ್‌ ಮೋರ್ಚಾಕ್ಕೆ  15 ಸ್ಥಾನ ಬಿಟ್ಟುಕೊಡುವುದಾಗಿ ಹೇಳಿತ್ತು. ಆದರೆ, ಇದಕ್ಕೆ ಒಪ್ಪದ ಮಾಂಝಿ ತಮ್ಮ ಪಕ್ಷಕ್ಕೆ ಮತ್ತಷ್ಟು ಸ್ಥಾನಗಳನ್ನು ಕೊಡುವಂತೆ ಶನಿವಾರ ಎರಡು ಸಲ ಅಮಿತ್‌ ಷಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಶುಕ್ರವಾರ ರಾತ್ರಿ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ  ಅವರು ಪಾಸ್ವಾನ್‌,ಕುಶ್ವಾಹ ಹಾಗೂ ಮಾಂಝಿ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ನಾಯಕರ ಜತೆ ಸ್ಥಾನ ಹೊಂದಾಣಿಕೆ ಕುರಿತು ಚರ್ಚಿಸಿದ್ದರು.

Write A Comment