ಕರ್ನಾಟಕ

ಇಬ್ಬರು ಪ್ರಗತಿಪರ ರೈತರಿಂದ ದಸರಾ ಉದ್ಘಾಟನೆ

Pinterest LinkedIn Tumblr

myಮೈಸೂರು: ನಾಡಹಬ್ಬ ದಸರಾ ಮಹೋತ್ಸವವನ್ನು ಅಕ್ಟೋಬರ್‌ 14ರಂದು ನಾಡಿನ ಪ್ರಗತಿಪರ ರೈತರೊಬ್ಬರು ಉದ್ಘಾಟಿಸಲಿದ್ದಾರೆ. ಅ.23 ರಂದು ಜಂಬೂಸವಾರಿ ನಡೆಯಲಿದೆ.

‘14ರಂದು ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಗತಿಪರ ರೈತರೊಬ್ಬರು ಉದ್ಘಾಟಿಸಲಿದ್ದಾರೆ. ಅಂದು ಸಂಜೆ ಅಂಬಾವಿಲಾಸ ಅರಮನೆ ಮುಂದೆ ನಡೆಯುವ ಸಾಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಇನ್ನೊಬ್ಬ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುತ್ತದೆ. ಇನ್ನೊಂದೆರಡು ದಿನಗಳಲ್ಲಿ ಇಬ್ಬರು ರೈತರನ್ನು ಆಯ್ಕೆಗೊಳಿಸಲಾಗುತ್ತದೆ’ ಎಂದು ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ವಿ. ಶ್ರೀನಿವಾಸಪ್ರಸಾದ್‌ ತಿಳಿಸಿದರು.

ಅವರು ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 14ರಿಂದ 21ರವರೆಗೆ ಅಂಬಾವಿಲಾಸ ಅರಮನೆ ಎದುರು ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮೈಸೂರು ಜಿಲ್ಲೆಯ ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

Write A Comment