ರಾಷ್ಟ್ರೀಯ

ನೇಪಾಳಿ ಮಹಿಳೆಯರ ಮೇಲೆ ಅತ್ಯಾಚಾರ: ರಾಯಭಾರಿಯ ವಿಚಾರಣೆಗಾಗಿ ಪೊಲೀಸರಿಂದ ವಿದೇಶಾಂಗ ಸಚಿವಾಲಯದ ಅನುಮತಿ ಯಾಚನೆ

Pinterest LinkedIn Tumblr

nepal-woman-story_647_090915114541ಗುರ್ಗಾಂವ್, ಸೆ.12: ನೇಪಾಳಿ ಮಹಿಳೆಯರಿಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಸೌದಿ ಅರೇಬಿಯನ್ ರಾಯಭಾರಿ ಹಾಗೂ ಆತನ ಪತ್ನಿಯ ವಿಚಾರಣೆಗೆ ಗುರ್ಗಾಂವ್ ಪೊಲೀಸರು ವಿದೇಶಾಂಗ ಸಚಿವಾಲಯದ ಅನುಮತಿಯನ್ನು ಕೇಳಿದ್ದಾರೆ.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಪಾಲು ಪಡೆದಿದ್ದರೆನ್ನಲಾದ ರಾಯಭಾರಿಯ ಸ್ನೇಹಿತರನ್ನು ಪತ್ತೆ ಹಚ್ಚುವ ಅಗತ್ಯ ಗುರ್ಗಾಂವ್ ಪೊಲೀಸರಿಗಿದೆಯೆಂಬುದನ್ನು ಟಿಒಐ ನಿನ್ನೆ ಹೇಳಿತ್ತು.

ಸೌದಿ ದೂತಾವಾಸದ ಪ್ರಧಾನ ಕಾರ್ಯದರ್ಶಿ ರಾಜತಾಂತ್ರಿಕ ರಕ್ಷಣೆ ಹೊಂದಿದ್ದರೂ, ಆತನ ಸ್ನೇಹಿತರಿಗೆ ಅದಿರಲಾರದು. ತಮ್ಮ ಮೇಲೆ ಅತ್ಯಾಚಾರದಲ್ಲಿ ಭಾಗಿಗಳಾಗಿದ್ದವರು ಗುರ್ಗಾಂವ್‌ನ ಕೈಟ್ರಿಯೋನಾ ಅಪಾರ್ಟ್‌ಮೆಂಟ್‌ನ ರಾಯಭಾರಿಯ ನಿವಾಸಕ್ಕೆ ಆಗಾಗ ಭೇಟಿ ನೀಡುತ್ತಿದ್ದವರಾಗಿದ್ದಾರೆಂದು ನೇಪಾಳಿ ಮಹಿಳೆಯರು ಆರೋಪಿಸಿದ್ದಾರೆ. ಎರಡು ವೈದ್ಯಕೀಯ ವರದಿಗಳು ದೌರ್ಜನ್ಯದ ಬರ್ಬರ ಸ್ವರೂಪವನ್ನು ಖಚಿತಪಡಿಸಿವೆ. ಮಹಿಳೆಯರ ಖಾಸಗಿ ಅಂಗಗಳು ಗಂಭೀರವಾಗಿ ಘಾಸಿಗೊಂಡಿವೆ. ಗಾಯಗಳು ವಾಸಿಯಾಗಲು ಕೆಲವು ತಿಂಗಳುಗಳೇ ಬೇಕಾಗಬಹುದೆಂದು ಅವು ತಿಳಿಸಿವೆ.

ಮಹಿಳೆಯರನ್ನು ಸೋಮವಾರ ರಾತ್ರಿ ರಕ್ಷಿಸಲಾಗಿತ್ತು. ಆದರೆ, ತನಿಖೆ ಯಾವುದೇ ಪ್ರಗತಿ ಕಂಡಿಲ್ಲ. ರಾಜತಾಂತ್ರಿಕ ಪರಿಣಾಮವಿರುವ ಪ್ರಕರಣದಲ್ಲಿ ಹೇಗೆ ಮುಂದುವರಿಯಬೇಕೆನ್ನುವ ಸಂದಿಗ್ಧದಲ್ಲಿ ಪೊಲೀಸರಿದ್ದಾರೆ. ಅಂತಹ ನಿಧಾನ ಗತಿಯ ತನಿಖೆ ಪ್ರಕರಣವನ್ನು ದುರ್ಬಲಗೊಳಿಸಬಹುದು ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ. ಕನಿಷ್ಠ, ರಾಯಭಾರಿಯ ಮಿತ್ರರು ಯಾರೆಂಬುದನ್ನು ಗುರುತಿಸುವ ಮೂಲಕ ತನಿಖೆಯನ್ನು ಆರಂಭಿಸಬೇಕೆಂದು ಅವರು ಬಯಸುತ್ತಿದ್ದಾರೆ.

Careers Talk

Write A Comment