ರಾಷ್ಟ್ರೀಯ

ಕಾಲ್ ಡ್ರಾಪ್: ಮೊಬೈಲ್ ಗೋಪುರಗಳ ಮುಟ್ಟುಗೋಲು

Pinterest LinkedIn Tumblr

Mobile_Towers_647014gಹೊಸದಿಲ್ಲಿ, ಸೆ.12: ದಿಲ್ಲಿಯ ಮೂರು ಮಹಾನಗರ ಪಾಲಿಕೆಗಳು ಮೊಬೈಲ್ ಗೋಪುರಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಟೆಲಿಕಾಂ ಇಲಾಖೆ (ಡಿಒಟಿ) ಮತ್ತು ‘ಟ್ರಾಯ್’ ಮಧ್ಯಪ್ರವೇಶ ಮಾಡಬೇಕೆಂದು ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳು ಮನವಿ ಮಾಡಿಕೊಂಡಿವೆ.

ಪಾಲಿಕೆಯ ಇಂತಹ ಏಕಪಕ್ಷೀಯ ಕ್ರಮದಿಂದ ಕ್ರಾಲ್ ಡ್ರಾಪ್ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ಟೆಲಿಕಾಂ ಕಂಪೆನಿಗಳ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
40 ಗೋಪುರಗಳನ್ನು ಮುಟ್ಟುಗೋಲು ಹಾಕಿಕೊಂಡಲ್ಲಿ, ಕಾಲ್ ಡ್ರಾಮ್ ಸಮಸ್ಯೆ ಶೇ. 20ರಷ್ಟು ಏರಲಿದೆ. ಕಳೆದ ಎರಡು ದಿನಗಳಲ್ಲಿ ದಿಲ್ಲಿ ಮಹಾನಗರ ಪಾಲಿಕೆಯು ದಿಲ್ಲಿಯಾದ್ಯಂತ 16 ಗೋಪುರಗಳನ್ನು ಬಂದ್ ಮಾಡಿಸಿದೆ. ಕಳೆದ ತಿಂಗಳು 70 ಗೋಪುರಗಳನ್ನು ಬಂದ್ ಮಾಡಿಸಿತ್ತು ಎಂದು ಕಂಪೆನಿ ಮುಖ್ಯಸ್ಥರು ಜಂಟಿ ಪತ್ರವೊಂದರಲ್ಲಿ ವಿವರಿಸಿದ್ದಾರೆ.

ಭಾರ್ತಿ ಏರ್‌ಟೆಲ್ ಜಂಟಿ ನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಗೋಪಾಲ್ ವತ್ತಲ್, ವೋಡಾಫೋನ್ ಇಂಡಿಯಾ ಸಿಇಒ ಮತ್ತು ಎಂಡಿ ಸುನೀಲ್ ಸೂದ್, ಐಡಿಯಾ ಸೆಲ್ಯೂಲಾರ್‌ನ ಹಿಮಾಂಶು ಕಪಾನಿಯಾ, ರಿಲಯೆನ್ಸ್ ಕಮ್ಯುನಿಕೇಶನ್‌ನ ಗುರ್ದೀಪ್ ಸಿಂಗ್, ಸಿಸ್ಟೆಮಾ ಶ್ಯಾಂನ ಸಿಇಒ ಸೆರ್ಗಿ ಸಾವ್‌ಚೆಂಕೊ, ಟಾಟಾ ಟೆಲಿಸರ್ವಿಸಸ್‌ನ ಎಂಡಿ ಎನ್.ಶ್ರೀನಾಥ್ ಜಂಟಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಸ್ಥಳೀಯ ಸಂಸ್ಥೆಗಳು ಮೊಬೈಲ್ ಗೋಪುರಗಳಿಗೆ ಬೀಗ ಹಾಕಿ ಬಂದ್ ಮಾಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಲಿಕಾಂ ಕಂಪೆನಿಗಳು ಸರಕಾರದ ಇಲಾಖೆಗಳಿಗೆ ಪತ್ರ ಬರೆದಿರುವುದು ಇದು ಎರಡನೆ ಸಲವಾಗಿದೆ.

ಮುಂಬೈಯಲ್ಲಿ ಮಹಾನಗರ ಪಾಲಿಕೆಗಳು ಮತ್ತು ನಿವಾಸಿ ಕಲ್ಯಾಣ ಸಂಘಗಳ ಏಕಪಕ್ಷೀಯ ಕ್ರಮಗಳಿಂದಾಗಿ ಮೊಬೈಲ್ ಗೋಪುರಗಳು ಬಂದ್ ಆಗಿವೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

Write A Comment