ರಾಷ್ಟ್ರೀಯ

ತಿಂದ ಬೀಡಾ ದುಡ್ಡು ಕೇಳಿದ್ದಕ್ಕೆ ವೃದ್ಧನನ್ನು ಸಾಯೋ ತನಕ ಹೊಡೆದರು 8 ಯುವಕರು

Pinterest LinkedIn Tumblr

oldman_beatಅಹಮದಾಬಾದ್: ಎಂಟು ಯುವಕರು ವದ್ಧನನ್ನು ಸಾಯೋ ತನಕ ಹೊಡಿದಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಅಹಮದಾಬಾದ್ ನಲ್ಲಿ ಅಸ್ಟೋಡಿಯಾ ಎಂಬ ಪ್ರದೇಶದಲ್ಲಿ ವೃದ್ಧರರೊಬ್ಬರು ಬೀ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಗೆ ಬಂದ ಯುವಕರು ಬೀಡಾ ಖರೀದಿಸಿ ತಿಂದಿದ್ದಾರೆ. ತಿಂದ ಬೀಡಾ ದುಡ್ಡು ಕೇಳಿದಕ್ಕೆ ಕೋಪಗೊಂಡ  8 ಯುವಕರು ವೃದ್ಧನನ್ನು ರಸ್ತೆಗೆ ಎಳೆತಂದು ಸಾಯುವ ತನಕ ಕೋಲುಗಳಿಂದ ಮನಬಂದಂತೆ ಹೊಡೆದು ಹಾಕಿದ್ದಾರೆ.

ಇದಿಷ್ಟು ಘಟನೆ ಸಾರ್ವಜನಿಕರ ಸಮ್ಮುಖದಲ್ಲೇ ಆಗಿದ್ದು, ಯಾರೋಬ್ಬರು ವೃದ್ಧನ ಸಹಾಯಕ ಧಾವಿಸಿಲ್ಲ. ಈ ಘಟನೆ ಸೆಪ್ಟೆಂಬರ್ 1ರಂದು ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

Write A Comment