ಮುಂಬೈ

ಮಾಂಸ ಮಾರಾಟ ನಿಷೇಧದ ಔಚಿತ್ಯ ಪ್ರಶ್ನಿಸಿದ ಮುಂಬೈ ಹೈಕೋರ್ಟ್

Pinterest LinkedIn Tumblr

meat-banಮುಂಬೈ: ಮಹಾರಾಷ್ಟ್ರ ಸರ್ಕಾರ ಮುಂಬೈ ನಲ್ಲಿ ಮಾಂಸ ಮಾರಾಟಕ್ಕೆ ನಿಷೇಧದ ಔಚಿತ್ಯವನ್ನು ಮುಂಬೈ ಹೈಕೋರ್ಟ್ ಪ್ರಶ್ನಿದೆ.

ಮೆಟ್ರೋಪಾಲಿಟನ್ ನಗರವಾಗಿರುವ ಮುಂಬೈ ನಲ್ಲಿ ನಾಲ್ಕು ದಿನಗಳ ವರೆಗೆ ಮಾಂಸ ಮಾರಾಟ ನಿಷೇಧಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ಬಾಂಬೆ ಮಾಂಸ ಮಾರಾಟಗಾರರ ಒಕ್ಕೂಟ ಹೈಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಿತ್ತು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಮಾಂಸ ಮಾರಾಟ ನಿಷೇಧದ ಔಚಿತ್ಯವನ್ನು ಪ್ರಶ್ನಿಸಿದ್ದಲ್ಲದೇ, ನಿಷೇಧ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಜೈನರ ಹಬ್ಬ ಪರ್ಯುಶನ್ ಪ್ರಯುಕ್ತ ಮುಂಬೈ ಮಾಂಸ ಮಾರಾಟಕ್ಕೆ ನಿಷೇಧ ವಿಧಿಸಿರುವುದಕ್ಕೆ ಮುಂಬೈ ನಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಸಹ ಸರ್ಕಾರದ ಕ್ರಮವನ್ನು ಖಂಡಿಸಿದೆ. ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಕೂಡ ಪ್ರತಿಭಟಿಸಿದೆ. ಶಿವಸೇನೆ ಹಾಗೂ ಎಂಎನ್ಎಸ್ ಕಾರ್ಯಕರ್ತರು ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಖಂಡಿಸಿ ರಸ್ತೆಯಲ್ಲೇ ಮಾಂಸ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

Write A Comment