ರಾಷ್ಟ್ರೀಯ

ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ತರಬೇತಿ

Pinterest LinkedIn Tumblr

MARSHALWEನವದೆಹಲಿ: ಒಂದರಿಂದ 10ನೆ ತರಗತಿಯ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ಕೌಶಲಗಳನ್ನು ಕಲಿಸುವ ತರಬೇತಿ ನೀಡಲು ಕೂಡಲೇ ಸಿದ್ಧತೆ ಮಾಡಿಕೊಳ್ಳುವಂತೆ  ಶಾಲೆಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ದೇಶನ ನೀಡಿದೆ.

ವಿದ್ಯಾರ್ಥಿನಿಯರ ಸುರಕ್ಷತೆಯ ಆತಂಕ ದೂರ ಮಾಡಲು ಮತ್ತು   ಲೈಂಗಿಕ ದೌರ್ಜನ್ಯ ತಡೆಗೆ ಈ ಕ್ರಮಕ್ಕೆ ಮಂಡಳಿ ಮುಂದಾಗಿದೆ.  ಈ ಸಂಬಂಧ ಸಿಬಿಎಸ್‌ಇ ತನ್ನ ಅಧೀನದ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.

ತರಬೇತಿಯಿಂದಾಗಿ ಬಾಲಕಿಯರು ತಮ್ಮ ಸುತ್ತಲಿನ ಪರಿಸರದ ಬಗ್ಗೆ ಹೆಚ್ಚು ಜಾಗರೂಕರಾಗುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಉಂಟಾಗುತ್ತದೆ ಮತ್ತು ಸಂಕಷ್ಟದ ಸ್ಥಿತಿಯಲ್ಲೂ ಅವರಲ್ಲಿ ಸುರಕ್ಷತೆಯ ಭಾವ ಇರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸುತ್ತೋಲೆಯ ಸಲಹೆಗಳು
* ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ಕಲೆ ಕಲಿಸಲು ತರಬೇತುದಾರರ ನೇಮಕ
* ಆತ್ಮರಕ್ಷಣಾ ಕಲೆ ಕುರಿತು ವಿದ್ಯಾರ್ಥಿ ನಿಯರಿಗೆ ಒಂದು ವಾರ ತರಬೇತಿ
* ಆತ್ಮರಕ್ಷಣಾ ಕಲೆ ತಿಳಿಸಿಕೊಡಲು ವಾರದಲ್ಲಿ ಒಂದು ಪೀರಿಯಡ್‌ ಮೀಸಲಿಡಬೇಕು

Write A Comment