ರಾಷ್ಟ್ರೀಯ

ಪಟೇಲ್ ಚಳವಳಿ: ಮೃತರಿಗೆ 4 ಲಕ್ಷ ರೂ. ಪರಿಹಾರ: ಗುಜರಾತ್ ಹೈಕೋರ್ಟ್ ಆದೇಶ

Pinterest LinkedIn Tumblr

GUJARATHC_21_10_2013ಅಹ್ಮದಾಬಾದ್, ಸೆ. 3: ಗುಜರಾತ್‌ನಲ್ಲಿ ಇತ್ತೀಚೆಗೆ ಪಟೇಲರು ನಡೆಸಿದ ಚಳವಳಿಯ ವೇಳೆ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಗುರುವಾರ ಆದೇಶಿಸಿದೆ.
ತಮಗೆ ಹಿಂದುಳಿದ ಜಾತಿಯ ಸ್ಥಾನಮಾನ ನೀಡಬೇಕು ಹಾಗೂ ಸರಕಾರಿ ಕೆಲಸಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಇತ್ತೀಚೆಗೆ ಪಟೇಲರು ಚಳವಳಿ ನಡೆಸಿದ್ದರು. 65 ಶೇಕಡಕ್ಕೂ ಅಧಿಕ ಅಂಗವೈಕಲ್ಯ ಹೊಂದಿದವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂಬುದಾಗಿಯೂ ನ್ಯಾಯಾಲಯ ಆದೇಶ ನೀಡಿತು.
ಅದೇ ವೇಳೆ, ಪ್ರತಿಭಟನನಿರತರ ಮೇಲೆ ನಡೆಸಲಾಯಿ ತೆನ್ನಲಾದ ಪೊಲೀಸ್ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸುವಂತೆ ಸಿಐಡಿ ಕ್ರೈಮ್‌ಗೆ ಹೈಕೋರ್ಟ್ ಸೂಚಿಸಿತು.
ಪಟೇಲರಿಗೆ ಮೀಸಲಾತಿ ನೀಡಬೇಕು, ಇಲ್ಲವೇ ಇಡೀ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಪಟೇಲ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಚಳವಳಿ ನಡೆಯುತ್ತಿದೆ.
ಹಾರ್ದಿಕ್ ಪಟೇಲ್ ಅಹ್ಮದಾಬಾದ್‌ನಲ್ಲಿ ಆಗಸ್ಟ್ 25ರಂದು ಬೃಹತ್ ರ್ಯಾಲಿಯೊಂದನ್ನು ನಡೆಸಿದ್ದರು. ಅದರಲ್ಲಿ ಲಕ್ಷಾಂತರ ಮಂದಿ ಪಟೇಲರು ಭಾಗವಹಿಸಿದ್ದರು. ಆದರೆ, ತಡ ರಾತ್ರಿ ಅಹ್ಮದಾಬಾದ್ ಪೊಲೀಸರು ಹಾರ್ದಿಕ್ ಪಟೇಲ್‌ರನ್ನು ಬಂಧಿಸಿದ ಬಳಿಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು.

Write A Comment