ರಾಷ್ಟ್ರೀಯ

ಕಂಧಮಲ್ ಆಸ್ಪತ್ರೆಯಲ್ಲಿ 4 ತಿಂಗಳಲ್ಲಿ 154 ನವಜಾತ ಶಿಶುಗಳ ಸಾವು!

Pinterest LinkedIn Tumblr

???????????????????????????????ಬರ್ಹಾಂಪುರ (ಒಡಿಶಾ), ಸೆ.3: ಎಪ್ರಿಲ್ ಹಾಗೂ ಜುಲೈಗಳ ನಡುವೆ ಕಂಧಮಲ್‌ನ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 154 ಹಸುಳೆಗಳು ಸಾವನ್ನಪ್ಪಿವೆ. ಇದು ಬುಡಕಟ್ಟು ಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಈ ಜಿಲ್ಲೆಯಲ್ಲಿ ಕಳೆದ ತಿಂಗಳವರೆಗೆ ಒಬ್ಬನೆ ಒಬ್ಬ ಮಕ್ಕಳ ತಜ್ಞನಿರಲಿಲ್ಲ.
ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಮರಣಹೊಂದಿರುವ 154 ಶಿಶುಗಳಲ್ಲಿ, 62 ಶಿಶುಗಳನ್ನು ಫೂಲ್ಬನಿಯ ಜಿಲ್ಲಾ ಮುಖ್ಯಪಟ್ಟಣದ ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ನಿಗಾ ಘಟಕಕ್ಕೆ (ಎಸ್‌ಎನ್‌ಸಿಯು) ದಾಖಲಿಸಲಾಗಿತೆಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
2014-15ರಲ್ಲಿ ಎಸ್‌ಎನ್‌ಸಿಯು, 142 ಶಿಶು ಮರಣಗಳಿಗೆ ಸಾಕ್ಷಿಯಾಗಿದೆ. ಈ ಘಟಕದಲ್ಲಿ 1,069 ಶಿಶುಗಳಿಗೆ ಚಿಕಿತ್ಸೆ ನೀಡಲಾಗಿತ್ತೆಂದು ಅವರು ಹೇಳಿದ್ದಾರೆ.
ಜನನದ ಸಮಯದಲ್ಲಿ ಕಡಿಮೆ ತೂಕ, ಪ್ರಸವ ಪೂರ್ವ ಮತ್ತು ಬಳಿಕದ ನಿಗಾದಲ್ಲಿ ಕೊರತೆ, ಅವಧಿ ಪೂರ್ವ ಪ್ರಸವ ಹಾಗೂ ಕೆಲವು ಬುಡಕಟ್ಟು ಸಮುದಾಯಗಳು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಲು ಒಪ್ಪದಿರುವುದು ಈ ಸಾವುಗಳಿಗೆ ಕಾರಣವೆನ್ನಲಾಗಿದೆ.
ಜಿಲ್ಲೆಯಲ್ಲಿ ಶಿಶು ಮರಣದ ಪ್ರಮಾಣ(ಐಎಂಆರ್) 1 ಸಾವಿರ ಸಜೀವ ಜನನಗಳಿಗೆ 58ರಷ್ಟಿವೆ. ರಾಜ್ಯದ ಸರಾಸರಿ ಪ್ರಮಾಣ 1 ಸಾವಿರಕ್ಕೆ 51 ಆಗಿದೆ.
ಶಿಶು ಮರಣದ ಪ್ರಮಾಣ ಇಷ್ಟೊಂದಿದ್ದರೂ, ಕಳೆದ ತಿಂಗಳ ವರೆಗೆ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಮಕ್ಕಳ ತಜ್ಞನಿರಲಿಲ್ಲ. ಮೇ ಯಲ್ಲಿ ಎಸ್‌ಎನ್‌ಸಿಯುನಲ್ಲಿ 26 ಹಸುಳೆಗಳು ಸಾವನ್ನಪ್ಪಿದ ಬಳಿಕ, ಕಂಧಮಲ್‌ನ ಕಲೆಕ್ಟರ್ ಯಾಮಿನಿ ಸಾರಂಗಿ ವೈದ್ಯರ ನೇಮಕಾತಿಗೆ ವಿನಂತಿಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು. ಅದರ ಬಳಿಕ, ಫೂಲ್ಬನಿ ಆಸ್ಪತ್ರೆಗೆ ಇತ್ತೀಚೆಗೆ ಮೂವರು ಮಕ್ಕಳ ತಜ್ಞರ ನೇಮಕವಾಗಿದೆ.

Write A Comment