ರಾಷ್ಟ್ರೀಯ

ಬಾಂಗ್ಲಾಗೆ ಪರಾರಿಯಾಗಲು ಸಿದ್ಧವಾಗಿದ್ದ ಇಂದ್ರಾಣಿ ಮೊದಲ ಪತಿಯ ಬಂಧನ

Pinterest LinkedIn Tumblr

arrestrest

ನವದೆಹಲಿ, ಸೆ.1: ಕೊನೆಗೂ ಪಶ್ಚಿಮ ಬಂಗಾಳದಲ್ಲಿ ಸೆರೆ ಸಿಕ್ಕಿರುವ ಪುತ್ರಿ ಶಿನಾಬೊರಾ ಹಂತಕಿ ತಾಯಿ ಇಂದ್ರಾಣಿಯ ಮೊದಲ ಪತಿ ಸಿದ್ದಾರ್ಥದಾಸ್ ಬಾಂಗ್ಲಾ ದೇಶಕ್ಕೆ ಪರಾರಿಯಾಗಲು ಸಿದ್ಧವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದೇಶವನ್ನೇ ಬೆಚ್ಚಿಬೀಳಿಸಿದ್ದ ಶಿನಾಬೊರಾ ಕೊಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ನಾಪತ್ತೆಯಾಗಿದ್ದ ಇಂದ್ರಾಣಿ ಮೊದಲ ಪತಿ ಸಿದ್ದಾರ್ಥದಾಸ್ ಅಂತೂ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಈ ಮೊದಲು ಇಂದ್ರಾಣಿ ಸಹೋದರ ಶಂತನುಬೊರಾ ಪೊಲೀಸರೊಂದಿಗೆ ಮಾತನಾಡಿ, ಶಿನಾಬೊರಾ ಹಾಗೂ ಮಿಖಾಯಿಲ್‌ಬೊರಾ ಇಬ್ಬರೂ ಸಿದ್ದಾರ್ಥದಾಸ್ ಮಕ್ಕಳೇ ಎಂದು ಹೇಳಿದ್ದ.

ಈಗ ಸಿದ್ದಾರ್ಥ ದಾಸ್ ಅದನ್ನೇ ಪುನರುಚ್ಛರಿಸಿದ್ದು, ಅವರಿಬ್ಬರೂ ನನ್ನ ಮಕ್ಕಳೇ ಎಂದು ಸ್ಪಷ್ಟಪಡಿಸಿದ್ದಾನೆ. ಪೊಲೀಸರ ವಿಚಾರಣೆಗೆ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿರುವ ಸಿದ್ದಾರ್ಥದಾಸ್, ಅಗತ್ಯವಿದ್ದರೆ ಡಿಎನ್‌ಎ ಪರೀಕ್ಷೆಗೂ ನಾನು ಸಿದ್ಧ ಎಂದು ತಿಳಿಸಿದ್ದಾನೆ.

Write A Comment