ರಾಷ್ಟ್ರೀಯ

ದೆಹಲಿ ಔರಂಗಜೇಬ್ ರಸ್ತೆಗೆ ಅಬ್ದುಲ್ ಕಲಾಂ ಹೆಸರಿಡಲು ಮುಸ್ಲಿಂ ಸಂಘಟನೆಗಳಿಂದ ವಿರೋಧ

Pinterest LinkedIn Tumblr

kalamನವದೆಹಲಿ: ದೆಹಲಿಯ ಔರಂಗಜೆಬ್ ರಸ್ತೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರನ್ನು ಮರುನಾಮಕರಣ ಮಾಡುವುದಕ್ಕೆ ಮುಸ್ಲಿಂ ಸಂಘಟನೆಗಳಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಉದ್ದೇಶಪೂರ್ವಕವಾಗಿ ಔರಂಗಜೇಬ್ ರಸ್ತೆ ಹೆಸರನ್ನು ಬದಲಾಯಿಸಲಾಗುತ್ತಿದೆ. ಇದರಿಂದಾಗಿ ಉಳಿದ ಕೆಲವು ನಗರ/ ರಸ್ತೆಗಳಿಗೂ ಮರುನಾಮಕರಣ ಮಾಡುವ ಇತಿಹಾಸಕ್ಕೆ ಮಾರಕವಾದ ಪ್ರವೃತ್ತಿ ಆರಂಭವಾಗುತ್ತದೆ ಎಂದು ಮುಸ್ಲಿಂ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಔರಂಗಜೆಬ್ ರಸ್ತೆಗೆ ಮರುನಾಮಕರಣ ಮಾಡುವುದು ಇಲ್ಲಿಗೇ ನಿಲ್ಲುವುದಿಲ್ಲ. ಈ ಪ್ರವೃತ್ತಿ ದೇಶದ ಇತರ ನಗರಗಳಿಗೂ ಹರಡಲಿದೆ. ಮೊಘಲ್ ರಾಜನ ಸಮಾಧಿ ಇರುವ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಗೆ ಮರುನಾಮಕರಣ ಮಾಡುವುದಾಗಿ ಶಿವಸೇನೆ ಹೇಳಿಕೆ ನೀಡಿದೆ. ಮೊಘಲ್ ರಾಜರ ಹೆಸರುಗಳನ್ನು ಹೊಂದಿರುವ ರಸ್ತೆ, ನಗರಗಳಿಗೆ ಮರುನಾಮಕರಣ ಮಾಡುವ ದೊಡ್ಡ ಪಟ್ಟಿಯೇ ಬೆಳೆಯುತ್ತದೆ ಎಂದು ಮುಸ್ಲಿಂ ಸಂಘಟನೆ ಮುಖಂಡ ಡಾ. ಎಸ್.ಕ್ಯೂ ಇಲಿಯಾಸ್ ಹೇಳಿದ್ದಾರೆ.

ಔರಂಗಜೇಬ್ ಹಿಂದೂ ವಿರೋಧಿಯಾಗಿರಲಿಲ್ಲ. ಆತ ಹಲವು ಹಿಂದೂ ದೇವಾಲಯಗಳನ್ನು ನಿರ್ಮಾಣ ಮಾಡಿದ್ದ. ಇತಿಹಾಸಕ್ಕೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ರಸ್ತೆಗಳಿಗೆ ನಾಮಕರಣ ಮಾಡಲಾಗುತ್ತದೆ. ಆದರೆ ಈಗ ಔರಂಗಜೇಬ್ ರಸ್ತೆಗೆ ಅಬ್ದುಲ್ ಕಲಾಂ ಅವರ ಹೆಸರನ್ನು ಮರುನಾಮಕರಣ ಮಾಡುವುದು ಇತಿಹಾಸಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ಇಲಿಯಾಸ್ ಅಭಿಪ್ರಾಯಪಟ್ಟಿದ್ದಾರೆ. ಅಬ್ದುಲ್ ಕಲಾಂ ಬದುಕಿದ್ದರೆ ಇಂತಹ ನಿರ್ಧಾರಗಳನ್ನು ಒಪ್ಪುತ್ತಿರಲಿಲ್ಲ ಎಂದು ಇಲಿಯಾಸ್ ತಿಳಿಸಿದ್ದಾರೆ.

Write A Comment