ರಾಷ್ಟ್ರೀಯ

ಮೀಸಲಾತಿಗಾಗಿ ರಾಷ್ಟ್ರಮಟ್ಟದಲ್ಲಿ ಹೋರಾಟ: ಹಾರ್ದಿಕ್ ಪಟೇಲ್

Pinterest LinkedIn Tumblr

370882-pti-hardik-patel ಹೊಸದಿಲ್ಲಿ,ಆ.30: ಗುಜರಾತ್‌ನಲ್ಲಿ ಪಟೇಲರ ಮೀಸಲಾತಿಗಾಗಿ ಆಗ್ರಹಿಸಿ ಮುಷ್ಕರ ನಿರತ ಹಾರ್ದಿಕ್ ಪಟೇಲ್ ರವಿವಾರ ಇಲ್ಲಿ ಹೊಸ ಬಾಂಬೊಂದನ್ನು ಸಿಡಿಸಿದ್ದಾರೆ. ಗುಜ್ಜರ್‌ಗಳು ಮತ್ತು ಕುರ್ಮಿಗಳು ಸೇರಿದಂತೆ ವಿವಿಧ ಸಮುದಾಯಗಳ ಸುಮಾರು 27 ಕೋಟಿ ಜನರಿಗೆ ಮೀಸಲಾತಿಗಾಗಿ ಆಗ್ರಹಿಸಿ ಮುಷ್ಕರವನ್ನು ರಾಷ್ಟ್ರಾದ್ಯಂತ ವಿಸ್ತರಿಸುವುದಾಗಿ ಅವರು ಪ್ರಕಟಿಸಿದ್ದಾರೆ.

ಇಲ್ಲಿ ವಿವಿಧ ಸಮುದಾಯಗಳ ನಾಯಕರೊಂದಿಗೆ ಸರಣಿ ಮಾತುಕತೆಗಳನ್ನು ನಡೆಸಿದ ಹಾರ್ದಿಕ್, ಮೀಸಲಾತಿಗಾಗಿ ನಡೆಯುತ್ತಿರುವ ಪ್ರತಿಭಟನೆ ‘100ಮೀ.ಓಟದ ಸ್ಪರ್ಧೆಯಲ್ಲ,ಅದು ಮ್ಯಾರಥಾನ್’ಎಂದರಲ್ಲದೆ,ಮುಷ್ಕರವನ್ನು ವಿಸ್ತರಿಸಲು ದೇಶದ ವಿವಿಧ ಭಾಗಗಳಲ್ಲಿ ಬೃಹತ್ ರ್ಯಾಲಿಗಳನ್ನು ನಡೆಸಲು ತಾನು ಉದ್ದೇಶಿಸಿದ್ದೇನೆ ಎಂದರು.

ಗುಜರಾತ್‌ನಲ್ಲಿ ಇಂದು ನಡೆಯುತ್ತಿರುವುದನ್ನು ರಾಷ್ಟ್ರಮಟ್ಟದಲ್ಲಿ ನಡೆಸಲು ನಾವು ಬಯಸಿದ್ದೇವೆ. ಸುಮಾರು 12 ರಾಜ್ಯಗಳ ಜನರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.

ಈ ಮುಷ್ಕರವೊಂದು ಮ್ಯಾರಥಾನ್ ಆಗಿದ್ದು,ಒಂದೆರಡು ವರ್ಷಗಳ ಕಾಲ ಸಾಗಲಿದೆ.ವಿವಿಧ ರಾಜ್ಯಗಳಲ್ಲಿರುವ ನಮ್ಮ ಸಮುದಾಯದ 27 ಕೋಟಿ ಜನರನ್ನು ಒಗ್ಗೂಡಿಸಲು ನಾವು ಬಯಸಿದ್ದೇವೆ. ನಮ್ಮ ಚಳವಳಿ ರಾಷ್ಟ್ರವ್ಯಾಪಿಯಾಗಬೇಕು. ಎಲ್ಲೆಲ್ಲಿ ಪಟೇಲ್ ಸಮುದಾಯಕ್ಕೆ ನನ್ನ ಅಗತ್ಯವಿದೆಯೋ ಅಲ್ಲಿಗೆಲ್ಲ ನಾನು ಹೋಗುತ್ತೇನೆ. ಈ ವೇಳೆಯಲ್ಲಿ ತೋಳ್ಬಲದ ಅಗತ್ಯ ನಮಗೆ ಕಂಡು ಬಂದರೆ ಅವರು ನಮಗೆ ನೆರವಾಗುತ್ತಾರೆ. ಅಗತ್ಯವಾದಾಗ ಅವರುಹೆದ್ದಾರಿಗಳಲ್ಲಿ ತಡೆಗಳನ್ನೊಡ್ಡುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಹಾರ್ದಿಕ್ ಹೇಳಿದರು.

Write A Comment