ಹೊಸದಿಲ್ಲಿ, ಆ.30: ಪಟೇಲ್ ಮೀಸಲಾತಿಯ ಹಿಂಸಾಚಾರದ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ನಲ್ಲಿ ಕನಿಷ್ಠ 10 ಮಂದಿ ಸಾವಿಗೀಡಾದ ಘಟನೆ ಇಡೀ ದೇಶವನ್ನು ಆಘಾತಗೊಳಿಸಿದೆಯೆಂದು ಹೇಳಿದ್ದಾರೆ. ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಘಟನೆಗಳು ಇಡೀ ದೇಶವನ್ನೇ ಚಿಂತೆಗೀಡು ಮಾಡಿವೆ. ಗಾಂಧಿ ಹಾಗೂ ಸರ್ದಾರ್ ಪಟೇಲರ ನೆಲದಲ್ಲಿ ಏನೆಲ್ಲ ನಡೆಯುತ್ತದೆಯೋ ಅದಕ್ಕೆ, ಮೊದಲು ಸಂಪೂರ್ಣ ದೇಶವೇ ಆಘಾತ ಹಾಗೂ ನೋವು ಅನುಭವಿಸುತ್ತದೆಂದು ‘ಮನ್‌ಕೀ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿವರು ತಿಳಿಸಿದ್ದಾರೆ.
ಗುಜರಾತ್‌ನ ಜನರನ್ನು ಶ್ಲಾಘಿಸಿದ ಮೋದಿ, ಅವರ ಸಹಕಾರದಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಕೆಲವೇ ಸಮಯದಲ್ಲಿ ತನ್ನ ಗುಜರಾತಿ ಸೋದರರು ಹಾಗೂ ಸೋದರಿಯರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಅವರು ಸಕ್ರಿಯ ಪಾತ್ರ ವಹಿಸಿದ್ದಾರೆ ಹಾಗೂ ಪರಿಸ್ಥಿತಿ ಹದಗೆಡುವುದಕ್ಕೆ ಅವಕಾಶ ನೀಡದೆ ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಿದ್ದಾರೆಂದು ಹೇಳಿದ್ದಾರೆ.
ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವಂತೆ ಜನರಿಗೆ ಕರೆ ನೀಡಿದ ಅವರು, ಕೇವಲ ಅಭಿವೃದ್ಧಿಯಷ್ಟೇ ಎಲ್ಲ ಸಮಸ್ಯೆಗಳನ್ನು ನಿವಾರಿಸಬಲ್ಲದು ಎಂದಿದ್ದಾರೆ. ಶಾಂತಿ, ಸಹೋದರತೆ ಹಾಗೂ ಏಕತೆಗಳು ಮಾತ್ರ ಸರಿಯಾದ ಮಾರ್ಗ. ನಾವು ಅಭಿವೃದ್ಧಿಯ ಹಾದಿಯಲ್ಲಿ ಒಟ್ಟಾಗಿ ನಡೆಯಬೇಕು. ಅಭಿವೃದ್ಧಿಯೇ ನಮ್ಮೆಲ್ಲ ಸಮಸ್ಯೆಗೆ ಏಕೈಕ ಪರಿಹಾರವೆಂದು ಪ್ರಧಾನಿ ಹೇಳಿದ್ದಾರೆ. ‘