ದೆಹಲಿಯ ಬದ್ರಪುರ್ ಪ್ರದೇಶದಲ್ಲಿ ಸೋಮವಾರ ನಡು ರಸ್ತೆಯಲ್ಲಿಯೇ ಸುಮಾರು 2.5 ಕೋಟಿ ರೂ. ಮೌಲ್ಯದ ಐಷಾರಾಮಿ ಲಾಂಬೊರ್ಗಿನಿ ಗಲಾರ್ಡೆ ಕಾರು ಹೊತ್ತಿ ಉರಿದ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ಘಟನೆ ನಡೆದಿದ್ದು, ಸುಜನ್ ಸಿಂಗ್ ಎಂಬುವವರು ಕಾರನ್ನು ಸರ್ವಿಸ್ ಮಾಡಿಸಲು ಮನೆಯಿಂದ ಹೊರಟು ಸ್ವಲ್ಪ ದೂರ ಸಾಗಿದ್ದಾಗ ಕಾರಿನ ಹಿಂಭಾಗದಲ್ಲಿ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದನ್ನು ಗಮನಿಸಿದ ಸುಜನ್ ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ.
ನೋಡ ನೋಡುತ್ತಿದ್ದಂತೆ ಕಾರು ಬೆಂಕಿ ಹತ್ತಿಕೊಂಡು ಧಗಧಗಿಸಿ ಉರಿದಿದ್ದು ಸ್ಥಳೀಯರು ಬೆಂಕಿಯನ್ನು ಆರಿಸುವ ಯತ್ನ ನಡೆಸಿದ್ದಾರೆ. ಆದರೂ ಸಾಹು ಬಹುಪಾಲು ಸುಟ್ಟು ಕರಕಲಾಗಿದ್ದು ಅದೃಷ್ಟವಶಾತ್ ಸುಜನ್ ಸಿಂಗ್ ಅವರಿಗೆ ಯಾವುದೇ ಅಪಾಯವಾಗಿಲ್ಲ.