ಕಳೆದೊಂದು ವಾರದಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಂಡಿದ್ದು ಆ ಮೂಲಕ ಬಂಗಾರ ಕೊಳ್ಳುವ ಕನಸಿನಲ್ಲಿದ್ದ ಗ್ರಾಹಕರಿಗೆ ನಿರಾಶೆಯಾಗಿದೆ.
ಕೆಲ ತಿಂಗಳಿನಿಂದ ಇಳಿಕೆಯಾಗಿದ್ದ ಚಿನ್ನದ ದರ ಕಳೆದೊಂದು ವಾರದಿಂದ ಏರಿಕೆ ಕಂಡು ಬರುತ್ತಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ, ರುಪಾಯಿ ಅಪಮೌಲ್ಯ ಹಿನ್ನೆಲೆಯಲ್ಲಿ ಚಿನ್ನದ ದರ ಗಗನಮುಖಿಯಾಗಿದೆ.
ಷೇರು ಮಾರು ಕಟ್ಟೆಯಲ್ಲಿನ ಕುಸಿತ ಹಾಗೂ ಹಬ್ಬದ ಸೀಜನ್ ಎದುರಾಗಿರುವುದರಿಂದ ಖರೀದಿದಾರರು ಚಿನ್ನ ಖರೀದಿಯತ್ತ ಚಿತ್ತವಿಟ್ಟಿದ್ದು ಪರಿಣಾಮ ಚಿನ್ನದ ಬೆಲೆಯಲ್ಲಿ 150 ರುಪಾಯಿ ಏರಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 27,575 ರುಪಾಯಿಗೆ ಏರಿಕೆಯಾಗಿದೆ.