ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೇನೆ ಮತ್ತು ಐಎಸ್ಐ ಬೆಂಬಲಿತ 17 ಭಯೋತ್ಪಾದಕ ತರಬೇತಿ ಶಿಬಿರಗಳಿದ್ದು ಅಲ್ಲಿ ತರಬೇತಿ ಪಡೆದಿರುವ ಸುಮಾರು 300 ಉಗ್ರರು ದೇಶದೊಳಗೆ ನುಸುಳಲು ಸಂಚು ರೂಪಿಸುತ್ತಿದ್ದಾರೆ ಎಂಬ ಆಘಾತಕರ ಮಾಹಿತಿ ಲಭ್ಯವಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಚರ್ಚಿಸುವುದರ ಜತೆಗೆ ಪಾಕಿಸ್ತಾನಕ್ಕೆ ಸಲ್ಲಿಸಲು ಸಂಗ್ರಹಿಸಿದ ದಾಖಲೆಯಲ್ಲಿ ಈ ವಿಷಯವೂ ಇತ್ತು ಎನ್ನಲಾಗಿದ್ದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್ ಎ ತೋಯಿಬಾ, ಜೈಷೆ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಸೇರಿದಂತೆ ಉಗ್ರ ಸಂಘಟನೆಗಳು 17 ತರಬೇತಿ ಶಿಬಿರಗಳನ್ನು ನಡೆಸುತ್ತಿರುವ ಕುರಿತಾಗಿ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿತ್ತು ಎನ್ನಲಾಗಿದೆ.
ಸೋಮವಾರ ನಡೆಯಬೇಕಿದ್ದ ಸಭೆಯಲ್ಲಿ ಪಾಕಿಸ್ತಾನಕ್ಕೆ ನೀಡಲು ಭಾರತ ಈ ಮಾಹಿತಿಯನ್ನು ಕಲೆ ಹಾಕಿತ್ತು ಎನ್ನಲಾಗಿದ್ದು ಈ ವರದಿಯಲ್ಲಿ ಸುಮಾರು 300 ಕ್ಕೂ ಹೆಚ್ಚು ಉಗ್ರರು ಸಕಲ ಶಸ್ತ್ರಾಸ್ತ್ರಗಳೊಂದಿಗೆ ಭಾರತದ ಗಡಿ ನುಸುಳಲು ಸಿದ್ದತೆ ನಡೆಸುತ್ತಿದ್ದಾರೆ ಎಂಬ ಅಂಶವೂ ಒಳಗೊಂಡಿತ್ತು ಎಂಬ ಮಾಹಿತಿ ಲಭ್ಯ ಮೂಲಗಳಿಂದ ಲಭಿಸಿದೆ.