ರಾಷ್ಟ್ರೀಯ

ಬೆಚ್ಚಿ ಬೀಳಿಸುವ ಸುದ್ದಿ :ಸೈಬರ್ ಕ್ರೈಂನಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ !!!

Pinterest LinkedIn Tumblr

cyberನವದೆಹಲಿ: ಆಧುನಿಕತೆ, ಮಾಹಿತಿ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದಂತೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗತೊಡಗಿವೆ. ಕಳವಳಕಾರಿ ಸಂಗತಿಯೆಂದರೆ ಭಾರತದಲ್ಲಿ ಕಳೆದ ವರ್ಷದಲ್ಲಿ ದಾಖಲಾದ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಶೇ. 69 ರಷ್ಟು ಹೆಚ್ಚಾಗಿದೆ. ಮಾತ್ರವಲ್ಲ, ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿದ ಪ್ರಮಾಣದಲ್ಲಿ ಶೇ.74.3ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ಸೈಬರ್ ಅಪರಾಧ ಪ್ರಕರಣ ಶೇ. 91.4ರಷ್ಟು ಹೆಚ್ಚಳವಾಗಿದ್ದು ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 2013ರಲ್ಲಿ 533 ಪ್ರಕರಣ ದಾಖಲಾಗಿದ್ದರೆ, 2014ರಲ್ಲಿ 1020 ಪ್ರಕರಣ ದಾಖಲಾಗಿವೆ. ಅದೇ ರೀತಿ ಮಹಾರಾಷ್ಟ್ರದಲ್ಲಿ 2013ರಲ್ಲಿ 907, 2014ರಲ್ಲಿ 1819(ಹೆಚ್ಚಳ-ಶೇ.107.2), ಉತ್ತರಪ್ರದೇಶದಲ್ಲಿ 2013ರಲ್ಲಿ 682, 2014ರಲ್ಲಿ 1737(ಹೆಚ್ಚಳ-ಶೇ.154.7) ಪ್ರಕರಣ ನಡೆದಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ 2014ರಲ್ಲಿ 9622 ಸೈಬರ್ ಅಪರಾಧ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಅವುಗಳಲ್ಲಿ ಶೇ. 48.18ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ನಡೆದಿವೆ ಎಂದು ಹೇಳಲಾಗಿದೆ.

ಅಂತರ್ಜಾಲ, ಸಾಮಾಜಿಕ ಜಾಲತಾಣದಂತಹ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಅಶ್ಲೀಲ ಚಿತ್ರ, ಸಾಹಿತ್ಯ ಪ್ರಕಟಿಸಿದ ಕಾರಣಕ್ಕೆ ಪ್ರಕರಣ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿ ಕರ್ನಾಟಕ, ಉತ್ತರಪ್ರದೇಶ ಮೊದಲ ಎರಡು ಸ್ಥಾನಗಳಲ್ಲಿವೆ. ಸೈಬರ್ ಮೂಲಕ ಮೋಸ, ವಂಚನೆ ಮಾಡಿದ 1115 ಪ್ರಕರಣ ದಾಖಲಾಗಿದ್ದು, ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಸೈಬರ್ ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ 5603 ಮಂದಿ ಬಂಧಿಸಿದ್ದು, ಇವರಲ್ಲಿ 118 ಮಹಿಳೆಯರೂ ಸೇರಿದ್ದಾರೆ

Write A Comment