ಮನೋರಂಜನೆ

‘ಬಾಹುಬಲಿ` ಭೇಟಿ ಮಾಡಿದ ಪ್ರಧಾನಿ !

Pinterest LinkedIn Tumblr

541990

ನವದೆಹಲಿ, ಜು.27: ಎರಡು ದಿನಗಳ ಹಿಂದೆಯಷ್ಟೇ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಭಾರತದ ಮೋಸ್ಟ್ ಎಕ್ಸ್‌ಪೆನ್ಸಿವ್ ಚಿತ್ರ ‘ಬಾಹುಬಲಿ’ ಯ ನಾಯಕ ಪ್ರಭಾಸ್ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅವರ ನವದೆಹಲಿ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.

baahubali-actor-prabhas-met-pm

ಈ ವಿಷಯವನ್ನು ಮೋದಿಯವರು ಟ್ವಿಟರ್ ಮೂಲಕ ತಿಳಿಸಿದ್ದಾರೆ. ಇವತ್ತು ಬಾಬಹುಬಲಿ ಪ್ರಭಾಸ್‌ರನ್ನು ಭೇಟಿಯಾದೆ ಎಂದು ಟ್ವೀಟ್ ಮಾಡಿದ ಮೋದಿ, ಪ್ರಭಾಸ್ ಜೊತೆಗಿನ ಫೋಟೊವನ್ನು ಸಹ ಶೇರ್ ಮಾಡಿದ್ದಾರೆ. (Met `Baahubali` Prabhas today) ಪ್ರಭಾಸ್ ಜೊತೆ ಅವರ ಸಂಬಂಧಿ ಹಾಗೂ ಹಿರಿಯ ನಟರಾದ ಕೃಷ್ಣಂರಾಜು ಮತ್ತು ಅವರ ಪತ್ನಿ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿದ್ದರು.

ಜುಲೈ 10 ರಂದು ಬಿಡುಗಡೆಯಾದ ‘ಬಾಹುಬಲಿ’ ಚಿತ್ರ ಬಿಡುಗಡೆಯ ದಿನವೇ 1 ಶತಕೋಟಿ ಗಳಿಸಿ ದಾಖಲೆ ನಿರ್ಮಿಸಿತ್ತು. ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಎರಡು ಭಾಗಗಳ ಐತಿಹಾಸಿಕ ಚಿತ್ರದ ಒಟ್ಟು ಬಜೆಟ್ 300 ಕೋಟಿ. ಬಾಹುಬಲಿ ಚಿತ್ರ ತಮಿಳು, ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆಯಾಗಿತ್ತು. ಅದೇ ರೀತಿ ಚಿತ್ರದ ಡಬ್ಬಿಂಗ್ ವರ್ಷನ್ ಹಿಂದಿ, ಮಲಯಾಳಂ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

Write A Comment