ರಾಷ್ಟ್ರೀಯ

ಮಕ್ಕಳ ದತ್ತು ಸ್ವೀಕಾರ ಇನ್ನೂ ಸರಳ !

Pinterest LinkedIn Tumblr

childrens

ನವದೆಹಲಿ, ಜು.27: ಮಕ್ಕಳಿಲ್ಲದೇ ಕೊರಗುತ್ತಿರುವವರಿಗೆ ದತ್ತು ಸ್ವೀಕಾರ ಪದ್ಧತಿ ಇನ್ನಷ್ಟು ಸುಲಭ ಹಾಗೂ ವೇಗವಾಗಲಿದೆ.

ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ ಮುಖ್ಯಸ್ಥೆ ಮೇನಕಾಗಾಂಧಿ ಅವರು ದತ್ತು ಸ್ವೀಕಾರ ಪದ್ಧತಿಯ ನೂತನ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗಿದೆ.

ದೇಶದಾದ್ಯಂತ ಅನೇಕ ದತ್ತು ಸ್ವೀಕಾರ ಏಜೆನ್ಸಿಗಳು ಇದ್ದು, ಎನ್‌ಆರ್‌ಐ ಮನೆಗಳಿಗೆ ಶೇ. 20ರಷ್ಟು ಮಾತ್ರ ದತ್ತು ನೀಡುವ ಬಗ್ಗೆ ಚಿಂತನೆ ನಡೆದಿದೆ. ಈ ಮಸೂದೆಯಲ್ಲಿ 25 ವರ್ಷ ಮೇಲ್ಪಟ್ಟ ದಂಪತಿಗಳಿಗೆ ಮೊದಲ ಅರ್ಹತೆ. ಒಂಟಿ ತಾಯಿ ಬೇಕಾದರೆ ಹೆಣ್ಣು ಅಥವಾ ಗಂಡು ಮಗುವನ್ನು ದತ್ತು ತೆಗೆದುಕೊಳ್ಳಬಹುದು. ಆದರೆ ತಂದೆಗೆ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳುವ ಅವಕಾಶವಿಲ್ಲ.

Write A Comment