ರಾಷ್ಟ್ರೀಯ

ಯಾಕೂಬ್‌ ಗಲ್ಲಿಗೆ ತಡೆಗೆ ಅರ್ಜಿ : ನಾಳೆ ಸುಪ್ರೀಂ ವಿಚಾರಣೆ

Pinterest LinkedIn Tumblr

yakoob

ಹೊಸದಿಲ್ಲಿ: ಗಲ್ಲು ಶಿಕ್ಷೆಗೆ ತಡೆ ಕೋರಿ ಮುಂಬಯಿ ಸರಣಿ ಸ್ಫೋಟ ದೋಷಿ ಯಾಕೂಬ್ ಮೆಮೊನ್‌ಗೆ ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಸೋಮವಾರ ಯಾವುದೇ ನಿರ್ಧಾರ ಪ್ರಕಟಿಸದೇ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.

ಹಲವು ಗಣ್ಯರೂ ಯಾಕೂಬ್‌ಗೆ ವಿಧಿಸಲಾಗಿರುವ ಮರಣದಂಡನೆಯನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿದ್ದರು.ಖುದ್ದು ಸುಪ್ರೀಂ ಕೋರ್ಟ್ ಯಾಕೂಬ್‌ನ ಕ್ಯುರೇಟಿವ್ ಅರ್ಜಿ ತಿರಸ್ಕರಿಸಲು ತೆಗೆದುಕೊಂಡ ನಿರ್ಣಯದ ಬಗ್ಗೆಯೂ ಪ್ರಶ್ನಿಸಿಕೊಂಡಿದೆ.

ಗಲ್ಲು ಶಿಕ್ಷೆ ಪ್ರಶ್ನಿಸಿ ಯಾಕೂಬ್ ಸಲ್ಲಿಸಿದ ಅರ್ಜಿ ತಿರಸ್ಕೃತವಾಗಿರುವಲ್ಲಿ ಗೋಚರವಾಗುವ ತಪ್ಪನ್ನು ವಿವರಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಕ್ಯುರೇಟಿವ್ ಅರ್ಜಿ ತಿರಸ್ಕೃತವಾಗಿರುವಲ್ಲಿ ನ್ಯಾ.ಎ.ಆರ್.ದವೆ ಮತ್ತು ನ್ಯಾ.ಕುರಿಯನ್ ಜೋಸೆಫ್ ಅವರಿದ್ದ ಪೀಠದಲ್ಲಿಯೇ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಕ್ಯುರೇಟಿವ್ ಅರ್ಜಿ ಬಗ್ಗೆ ಇರುವ ನಿಯಮಗಳನ್ನು ಮಂಗಳವಾರ ವಿವರಿಸುವಂತೆ ಅಟಾರ್ನಿ ಜನರಲ್‌ಗೆ ಪೀಠ ಹೇಳಿದೆ.

ಅರ್ಜಿ ಸಂಬಂಧಿಸಿದಂತೆ ನ್ಯಾ.ಜೋಸೆಫ್‌ಗೆ ಹಲವು ಅನುಮಾನಗಳು ಕಾಡಿದರೆ, ನ್ಯಾ.ದವೆ ‘ಒಂದು ಅರ್ಜಿಯನ್ನು ಈ ರೀತಿ ನಡೆಸಿಕೊಂಡರೆ, ನ್ಯಾಯ ಪ್ರಕ್ರಿಯೆಗೇ ಕೊನೆಯೇ ಇಲ್ಲದಂತಾಗುತ್ತದೆ,’ ಎಂದು ಹೇಳಿದ್ದಾರೆ.

1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದ ಆರೋಪಿಗಳನ್ನು ದೋಷಿಗಳೆಂದು ನಿರ್ಧರಿಸಿಯಾಗಿದೆ. ಈ ಸಂದರ್ಭದಲ್ಲಿ ಅದರ ಪರಿಶೀಲನೆ ಸಾಧ್ಯವಿಲ್ಲ, ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ವಿಚಾರಣೆ ಮಂಗಳವಾರ ಮುಂದುವರಿಯಲಿದೆ.

Write A Comment