ಅಂತರಾಷ್ಟ್ರೀಯ

ವಿಮಾನಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ವ್ಯಕ್ತಿಯ ಬಂಧನ

Pinterest LinkedIn Tumblr

1

ಬೀಜಿಂಗ್: ಷೆನ್ಝೆನ್ ಏರ್ ಲೈನ್ಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ವಿಮಾನ ಇಳಿಯಲು ರನ್ ವೇನಲ್ಲಿ ಸಾಗುತ್ತಿದ್ದ ವೇಳೆ ವಿಮಾನಕ್ಕೆ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ದಕ್ಷಿಣ ಚೀನಾದಲ್ಲಿ ಭಾನುವಾರ ನಡೆದಿದೆ.

11

2

ವಿಮಾನ ಇಳಿಯಲು ರನ್ ವೇ ನಲ್ಲಿ ಸಾಗುತ್ತಿದ್ದ ವೇಳೆ ವಿಮಾನದ ಸೀಟಿಗೆ ಬೆಂಕಿ ಹಚ್ಚಲು ಪ್ರಯಾಣಿಕನೊಬ್ಬ ಯತ್ನಿಸಿದ್ದು, ಗಾಬಿರಿಗೊಂಡ ಸಹ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಕಾಲದಲ್ಲಿ ಬೆಂಕಿ ನಂದಿಸಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ. ಈ ವಿಮಾನದಲ್ಲಿ 95 ಮಂದಿ ಪ್ರಯಾಣಿಕರು ಹಾಗೂ 9 ಮಂದಿ ಸಿಬ್ಬಂದಿಯಿದ್ದರು.

ಆದರೆ ವಿಮಾನದ ಒಂದು ಸೀಟ್ ಹಾಗೂ ತುರ್ತು ನಿರ್ಗಮನ ದ್ವಾರದ ಕೆಲ ಭಾಗ ಸುಟ್ಟಿದ್ದು, ಬೆಂಕಿ ನಂದಿಸುವ ವೇಳೆ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಪೈಲೆಟ್ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿ ಹಚ್ಚಿದ ವ್ಯಕ್ತಿಯನ್ನು ಬಂಧಿಸಿದ್ದಾರೆ.

Write A Comment