ರಾಷ್ಟ್ರೀಯ

ಭಾರತೀಯ ಸೇನೆಯಲ್ಲಿ ಕೆಲವು ಯುದ್ಧ ಸಾಮಗ್ರಿಗಳಿಗೆ ಕೊರತೆ

Pinterest LinkedIn Tumblr

armyಡ್ರಾಸ್: ಭಾರತೀಯ ಸೇನೆಯಲ್ಲಿ ಕೆಲವು ಯುದ್ಧಸಾಮಗ್ರಿಗಳಿಗೆ ಕೊರತೆ ಎದುರಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಡಿ.ಎಸ್ ಹೂಡಾ ತಿಳಿಸಿದ್ದಾರೆ.

ಯುದ್ಧಸಾಮಗ್ರಿಗಳಿಗೆ ಕೊರತೆ ಉಂಟಾಗಿರುವುದನ್ನು ಸಂಸತ್ ನ ಗಮನಕ್ಕೆ ತರಲಾಗಿದೆ. ಈಗ ಲಭ್ಯವಿರುವ ಕೆಲ ಯುದ್ಧ ಸಾಮಗ್ರಿಗಳಲ್ಲಿ ಕೊರತೆ ಉಂಟಾಗಿದ್ದು ಕೊರತೆಯನ್ನು ಸರಿದೂಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿ.ಎಸ್ ಹೂಡಾ ಹೇಳಿದ್ದಾರೆ.

ಪ್ರಸ್ತುತ ಎದುರಾಗಿರುವ ಕೊರತೆಯಿಂದ ಸೇನೆಯ ದಿನನಿತ್ಯದ ಕಾರ್ಯಾಚರಣೆಗೆ ತೊಂದರೆ ಉಂಟಾಗುವುದಿಲ್ಲ, ಯುದ್ಧ ಸನ್ನಿವೇಶಗಳಲ್ಲಿ ಮಾತ್ರವೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ ಎಂದು ಹೂಡಾ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಒನ್ ರ್ಯಾಂಕ್, ಒನ್ ಪೆನ್ಷನ್ ಬಗ್ಗೆಯೂ ಮಾತನಾಡಿರುವ ಹೂಡಾ, ಕೇಂದ್ರ ಸರ್ಕಾರ ಈ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Write A Comment