ರಾಷ್ಟ್ರೀಯ

ನ್ಯಾಯಾಲಯದ ಕಲಾಪಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ ಗೆ ಸರ್ಕಾರ ಪ್ರಸ್ತಾಪ

Pinterest LinkedIn Tumblr

supreme-courtನವದೆಹಲಿ: ಸಾಕ್ಷಿಗಳು ಹೇಳಿಕೆಗಳನ್ನು ಬದಲಾಯಿಸಲು ಅವಕಾಶವಿಲ್ಲದಿರುವುದರಿಂದ ಮತ್ತು ನ್ಯಾಯಾಲಯದ ವಿಚಾರಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಕ್ಷಿಪ್ರ ವಿಚಾರಣೆ ತರಲು ಕಲಾಪಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಒತ್ತುಪಡಿಸಲಿದೆ.

ಸುಪ್ರೀಂಕೋರ್ಟ್ ನ ನ್ಯಾಯಾಧೀಶರ ತಂಡ ಸರ್ಕಾರದ ಆದೇಶವನ್ನು ತಿರಸ್ಕರಿಸಿದ್ದ ಕಾರಣ ಇ-ಸಮಿತಿ ಮುಂದೆ ಕೇಂದ್ರ ಸರ್ಕಾರ ಮನವಿ ಮಾಡಲಿದೆ. ಕೆಳಹಂತಗಳ ನ್ಯಾಯಾಲಯಗಳಲ್ಲಿ ಕಲಾಪಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆಯನ್ನು ಪ್ರಥಮ ಹಂತದಲ್ಲಿ ಜಾರಿಗೆ ತರಲು ಸರ್ಕಾರ ಪ್ರಸ್ತಾಪ ಸಲ್ಲಿಸಿದೆ.

ಪ್ರಸ್ತುತ ನಮ್ಮ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 3.2 ಕೋಟಿ ಕೇಸುಗಳು ಇತ್ಯರ್ಥವಾಗದೆ ಉಳಿದುಕೊಂಡಿದ್ದು, ಅವುಗಳಲ್ಲಿ 2.8 ಕೋಟಿ ಕೇಸುಗಳು ಕೆಳಹಂತದ ನ್ಯಾಯಾಲಯಗಳಲ್ಲಿ ಇವೆ ಎಂದು ಕಾನೂನು ಸಚಿವಾಲಯದ ಅಂಕಿಅಂಶ ತಿಳಿಸುತ್ತದೆ.

ರಾಷ್ಟ್ರೀಯ ನ್ಯಾಯ ವಿತರಣೆ  ಮತ್ತು ಕಾನೂನು ಸುಧಾರಣೆಗಳ ಸಲಹಾ ಆಯೋಗದ ಮುಂದೆ ಕಾನೂನು ಸಚಿವಾಲಯ ಅಂಕಿಅಂಶಗಳನ್ನು ಪ್ರಸ್ತುತಪಡಿಸಿದ್ದು, ಆಯೋಗದ ನಿವೃತ್ತ ಅಧ್ಯಕ್ಷ ಎ.ಪಿ.ಶ್ಹಾ, ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾಯೋಗಿಕವಾಗಿ ಹಂತಹಂತವಾಗಿ ಆಡಿಯೋ-ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸಲಹೆ ನೀಡಿದ್ದಾರೆ.

ಈ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಪಾರದರ್ಶಕ ವಿಚಾರಣೆ ನಡೆಯುವ ಸಾಧ್ಯತೆಯಿದ್ದು, ಜೊತೆಗೆ ತ್ವರಿತ ನ್ಯಾಯ ವಿಲೇವಾರಿಯಾಗಬಹುದೆಂಬುದು ಸರ್ಕಾರದ ಅಭಿಪ್ರಾಯವಾಗಿದೆ.

Write A Comment