ರಾಷ್ಟ್ರೀಯ

ವಕೀಲರಿಗೆ ಕೇಸ್ ನೀಡುವ ಮುನ್ನ ನೀವಿದನ್ನು ಓದಲೇಬೇಕು !

Pinterest LinkedIn Tumblr

2331Video-Marketing-for-Lawyers1ನ್ಯಾಯಾಲಯಗಳಲ್ಲಿ ‘ಗೆದ್ದವ ಸೋತ, ಸೋತವ ಸತ್ತ’ ಎಂಬ ಮಾತೊಂದು ಪ್ರಚಲಿತದಲ್ಲಿರುವುದು ಎಲ್ಲರಿಗೂ ತಿಳಿದ  ವಿಷಯ. ಆದರೆ ಇದೀಗ ‘ಕಪ್ಪು ಕೋಟು ಕಂಡರೂ ಪರಾಂಬರಿಸಿ ನೋಡು’  ಎನ್ನುವ ಪರಿಸ್ಥಿತಿ ಒದಗಿ ಬಂದಿದೆ. ಅರೆ  ಇದೇಕೆ ಅಂತೀರಾ..? ಈ ಸ್ಟೋರಿ ಓದಿ.

ಹೌದು. ನಕಲಿ ವಸ್ತುಗಳು , ನಕಲಿ ವೈದ್ಯರು, ನಕಲಿ ಪೊಲೀಸರು, ಹೀಗೆ ಹಲವು ನಕಲಿಗಳ ಪಟ್ಟಿಗೆ ಇದೀಗ ನಕಲಿ ವಕೀಲರ ಸೇರ್ಪಡೆಯಾಗಿದೆ.  ಕಪ್ಪು ಕೋಟ್ ಧರಿಸಿ, ಕೋರ್ಟ್‌ನಲ್ಲಿ ನ್ಯಾಯಕ್ಕಾಗಿ ಹೋರಾಡುವ ಎಲ್ಲರೂ ಅಸಲಿ ಕಾನೂನು ಪದವಿ ಪಡೆದಿಲ್ಲ ಎಂಬ ಆಘಾತಕಾರಿ ವಿಷಯವೊಂದು ಬಹಿರಂಗವಾಗಿದ್ದು ದೇಶದಲ್ಲಿ ಶೇ.30ರಷ್ಟು ವಕೀಲರು ನಕಲಿ ಕಾನೂನು ಪದವೀಧರು ಎಂಬ ರಹಸ್ಯವೂ ಹೊರಬಿದ್ದಿದೆ.

ವಕೀಲರ ಸಮಾವೇಶದಲ್ಲಿ ಈ ಮಾಹಿತಿಯನ್ನು ಸ್ವತಃ ಬಾರ್ ಕೌನ್ಸಿನ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಬಹಿರಂಗಗೊಳಿಸಿದ್ದು ವೃತ್ತಿ ನೀತಿ ಸಂಹಿತೆಯನ್ನು ಮುರಿಯುವ, ಅಶಿಸ್ತಿನಿಂತ ವರ್ತಿಸುವ ಹಾಗೂ ನಕಲಿ ಕಾನೂನು ಪದವಿ ಹೊಂದಿರುವ ವಕೀಲರನ್ನು ಪತ್ತೆ ಹಚ್ಚಿ ಕಿತ್ತು ಹಾಕಲಾಗುತ್ತಿದ್ದು ಈ ಸಮಯದಲ್ಲಿ ದೇಶದಲ್ಲಿರುವ ವಕೀಲರ ಕಾಲು ಭಾಗಕ್ಕಿಂತಲೂ ಹೆಚ್ಚು ನಕಲಿ ವಕೀಲರಿದ್ದಾರೆ ಎಂಬ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ಅಲ್ಲದೇ ಇಂತಹ ನಕಲಿ ವಕೀಲರ ಹಾವಳಿಯಿಂದ ನ್ಯಾಯಾಂಗ ವ್ಯವಸ್ಥೆಗೆ ಕೆಟ್ಟ ಹೆಸರು ಬರುವುದರ ಜತೆಗೆ ಕಕ್ಷೀದಾರರಿಗೆ ಅನ್ಯಾಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Write A Comment