ರಾಷ್ಟ್ರೀಯ

44 ಮಾನವಕಳ್ಳ ಸಾಗಣೆದಾರರ ಸೆರೆ : 39 ಮಹಿಳೆಯರ ರಕ್ಷಣೆ

Pinterest LinkedIn Tumblr

manavaಹೈದರಾಬಾದ್,ಜು.24- ವೇಶ್ಯಾವಾಟಿಕೆ ಜಾಲದ 44 ಮಂದಿ ಮಾನವಕಳ್ಳ ಸಾಗಣೆದಾರರನ್ನು ಬಂಧಿಸಿರುವ ತೆಲಂಗಾಣ ಪೊಲೀಸರು, ಮಹಾರಾಷ್ಟರದ ಚಂದ್ರಾಪುರ್‌ನಿಂದ 8 ಮಂದಿ ಅಪ್ರಾಪ್ತ ಬಾಲಕಿಯರು ಸೇರಿದಂತೆ ಒಟ್ಟು 39  ಮಹಿಳೆಯರನ್ನು ರಕ್ಷಿಸಿದ್ದಾರೆ. ತಮಗೆ ದೊರೆತ ಸುಳಿವಿನ ಮೇಲೆ ಈ ದಾಳಿ ನಡೆಸಿದ ಅಪರಾಧ ತನಿಖಾ ವಿಭಾಗದ(ಸಿಐಡಿ) ಪೊಲೀಸರು ಈ ಕಾರ್ಯಚರಣೆ ನಡೆಸಿದ್ದು , ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸಿಐಡಿ

ಹೆಚ್ಚವರಿ ಮಹಾನಿರ್ದೇಶಕ ಎ.ಸತ್ಯ ನಾರಾಯಣ ಹೇಳಿದ್ದಾರೆ.  44  ಆರೋಪಿಗಳಲ್ಲಿ 30 ಮಂದಿ ಮಹಿಳೆಯರು 7 ಮಂದಿ ಬಾಲಕರು ಸೇರಿದ್ದು , ಅವರನ್ನೆಲ್ಲ ಮಹಾರಾಷ್ಟ್ರ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Write A Comment