ರಾಷ್ಟ್ರೀಯ

ನಾಲ್ಕನೇ ದಿನವೂ ಕೋಲಾಹಲಕ್ಕೆ ಆಹುತಿಯಾದ ಕಲಾಪ; ಸೋಮವಾರಕ್ಕೆ ಮಂದೂಡಿಕೆ

Pinterest LinkedIn Tumblr

lokaನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಕೋಲಾಹಲವನ್ನು ಮುಂದುವರೆಸಿದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ಕಪ್ಪು ಪಟ್ಟಿ ಧರಿಸಿ ಸದನಕ್ಕೆ ಆರಂಭಿಸಿದ್ದ ಕಾಂಗ್ರೆಸ್ ಸಂಸದರು ಕಲಾಪದ ಆರಂಭದಲ್ಲೇ ಸ್ವರಾಜ್ ರಾಜೀನಾಮೆಗೆ ಆಗ್ರಹಿಸಿ ಗಲಾಟೆಯನ್ನು ಪ್ರಾರಂಭಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು. ಕೋಲಾಹಲವನ್ನು ನಿಯಂತ್ರಿಸುವಲ್ಲಿ ವಿಫಲರಾದ ಸ್ಪೀಕರ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

4 ದಿನಗಳಿಂದ ಸದನ ಗದ್ದಲ ಕೋಲಾಹಲಕ್ಕೆ ಆಹುತಿಯಾಗಿದ್ದು, ಇಂದು ಕೂಡ ಯಾವುದೇ ಚರ್ಚೆಯಾಗದೇ ಮುಂದೂಡಲ್ಪಟ್ಟಿತ್ತು.

ಕಾಂಗ್ರೆಸ್‌ನ ಈ ವಿರೋಧ ಪ್ರದರ್ಶನವನ್ನು ವಿರೋಧಿಸಿ ಬಿಜೆಪಿ ಸಂಸದರು ಸಂಸತ್ ಹೊರಗಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯಸಭೆಯಲ್ಲೂ ವಿರೋಧ ಪಕ್ಷಗಳು ತೀವ್ರ ಗದ್ದಲ ನಡೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ.

Write A Comment