ರಾಷ್ಟ್ರೀಯ

ಡ್ರಗ್ಸ್, ನಪುಂಸಕತ್ವ, ಪ್ರಮೇ ಪ್ರಕರಣ, ವರದಕ್ಷಿಣೆ ರೈತರ ಆತ್ಮಹತ್ಯೆಗೆ ಕಾರಣ: ಕೇಂದ್ರ ಬಿಜೆಪಿ ಸಚಿವ

Pinterest LinkedIn Tumblr

radhaನವದೆಹಲಿ: ದೇಶದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ಡ್ರಗ್ಸ್, ಪ್ರೇಮ ಪ್ರಕರಣ, ವರದಕ್ಷಿಣೆ ಮತ್ತು  ನಪುಂಸಕತ್ವ ಪ್ರಮುಖ ಕಾರಣಗಳಾಗಿವೆಯೇ ಹೊರತು ಸಾಲದ ಹೊರೆ ಅಥವಾ ಕೃಷಿ ಉತ್ಪಾದನೆಯಲ್ಲ ಎಂದು ಕೇಂದ್ರ ಕೃಷಿ ಖಾತೆ ಸಚಿವ ರಾಧಾ ಮೋಹನ ಸಿಂಗ್ ಹೇಳಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ರೈತರ)ದ ಪ್ರಕಾರ, ಕೌಟಂಬಿಕ ಸಮಸ್ಯೆ, ಡ್ರಗ್ಸ್, ಅನಾರೋಗ್ಯ, ವರದಕ್ಷಿಣೆ, ಪ್ರೇಮ ಪ್ರಕರಣಗಳು ಹಾಗೂ ನಪುಂಸಕತ್ವ ರೈತರ ಆತ್ಮಹತ್ಯೆಗೆ ಕಾರಣವಾಗಿವೆ. ಸಾಲದ ಹೊರೆ ರೈತರ ಆತ್ಮಹತ್ಯೆಗೆ ಕಾರಣವಲ್ಲ ಎಂದು ಸಂಸತ್ತಿಗೆ ಲಿಖಿತ ಉತ್ತರ ನೀಡಿದ್ದಾರೆ.

ಕಳೆದ ವರ್ಷ ದೇಶದಲ್ಲಿ ಸುಮಾರು 1400 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿವಾದಾತ್ಮಕ ಭೂಸ್ವಾಧೀನ ಮಸೂದೆ ರೈತರ ವಿರೋಧಿ ಮತ್ತು ಬಡವರ ವಿರೋಧಿ ಎಂದು ವಿಪಕ್ಷಗಳು ಬಿಂಬಿಸುತ್ತಿರುವುದು ಕೂಡಾ ರೈತರ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಆಮ್ ಆದ್ಮಿ ಪಕ್ಷದ ರ್ಯಾಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನನ್ನು ಉದ್ದೇಶಿಸಿ ಮಾತನಾಡಿದ್ದ ಹರಿಯಾಣಾದ ಬಿಜೆಪಿ ಸರಕಾರದ ಸಚಿವ ಓ.ಪಿ.ಧನಕರ್, ರೈತರ ಆತ್ಮಹತ್ಯೆ ಅಪರಾಧವಾಗಿದೆ ಇದೊಂದು ಹೇಡಿಗಳ ಕೃತ್ಯ ಎಂದು ಕಿಡಿಕಾರಿದ್ದರು

Write A Comment