ರಾಷ್ಟ್ರೀಯ

ಡೇಟಿಂಗ್ ಸೈಟ್‍ಗೆ ಕನ್ನ: ಬಯಲಾಯ್ತು ಬಣ್ಣ!: ಡೇಟಿಂಗ್ ಸೈಟ್ ಮೂಲಕ ವಿವಾಹೇತರ ಲೈಂಗಿಕ ಸಂಪರ್ಕ ಹೊಂದುತ್ತಿದ್ದ ಲಕ್ಷಾಂತರ ಭಾರತೀಯರಿಗೆ ಅಕ್ಷರಶಃ ನಡುಕ ಶುರ

Pinterest LinkedIn Tumblr

ASHLEY-MADISONಮುಂಬೈ: ಡೇಟಿಂಗ್ ಸೈಟ್ ಮೂಲಕ ವಿವಾಹೇತರ ಲೈಂಗಿಕ ಸಂಪರ್ಕ ಹೊಂದುತ್ತಿದ್ದ ಲಕ್ಷಾಂತರ ಭಾರತೀಯರಿಗೆ ಅಕ್ಷರಶಃ ನಡುಕ ಶುರುವಾಗಿದೆ.

ಈವರೆಗೆ ಕದ್ದುಮುಚ್ಚಿ ಮಾಡುತ್ತಿದ್ದ ವ್ಯವಹಾರ ಎಲ್ಲಿ ಬೆಳಕಿಗೆ ಬರುತ್ತದೋ ಎಂಬ ಭಯದಿಂದಾಗಿ ಎಲ್ಲರೂ ತಲೆ ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದು ಕೇಳುತ್ತೀರಾ? ವಿವಾಹೇತರ ಸಂಬಂಧಕ್ಕೆ ಅನುವು ಮಾಡಿಕೊಡುತ್ತಿದ್ದ  ಡೇಟಿಂಗ್ ಸೈಟ್ ಆ್ಯಶ್ಲೆ ಮ್ಯಾಡಿಸನ್ ಅನ್ನು `ದಿ ಇಂಪ್ಯಾಕ್ಟ್ ಟೀಂ’ ಎಂಬ ಹ್ಯಾಕರ್‍ಗಳು ಹ್ಯಾಕ್ ಮಾಡಿದ್ದಾರೆ. ಬರೋಬ್ಬರಿ 3.70 ಕೋಟಿ ಗ್ರಾಹಕರ ರಹಸ್ಯ ಲೈಂಗಿಕ ಅತಿರೇಕಗಳ ಮಾಹಿತಿ, ಇಮೇಲ್ ವಿಳಾಸಗಳು, ಕ್ರೆಡಿಟ್ ಕಾರ್ಡ್ ವಹಿವಾಟುಗಳ ವಿವರಗಳನ್ನೂ ಇವರು ಕದ್ದಿದ್ದಾರೆ. ಈ ಪೈಕಿ ಕೆಲವು ಮಾಹಿತಿಗಳನ್ನು ಆನ್‍ಲೈನ್ ನಲ್ಲಿ ಬಹಿರಂಗಪಡಿಸಲಾಗಿದೆ.

ಅಷ್ಟೇ ಅಲ್ಲ, ಈ ವೆಬ್‍ಸೈಟ್ ಅನ್ನು ಮುಚ್ಚಬೇಕೆಂದು ಪಟ್ಟು ಹಿಡಿದಿರುವ ಹ್ಯಾಕರ್‍ಗಳು, ಇಲ್ಲದಿದ್ದರೆ ಪ್ರತಿಯೊಬ್ಬರ ವಿವರಗಳನ್ನೂ ಜಗಜ್ಜಾಹೀರುಗೊಳಿಸುತ್ತೇವೆ ಎಂಬ ಬೆದರಿಕೆಯನ್ನೂ ಹಾಕಿದ್ದಾರೆ. ಹ್ಯಾಕರ್‍ಗಳ ಈ ಎಚ್ಚರಿಕೆಯು ಪತ್ನಿ/ಪತಿಗೆ ಗೊತ್ತಿಲ್ಲದಂತೆ ಮೂರನೆಯವರ ಜತೆ ಲೈಂಗಿಕ ಸಂಪರ್ಕ ಮಾಡಿ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಅನೇಕರ ಬೆವರಿಳಿಸಿದೆ.

2.75 ಲಕ್ಷಕ್ಕೂ ಹೆಚ್ಚು ಭಾರತೀಯರು!: ಆ್ಯಶ್ಲೆ ಮ್ಯಾಡಿಸನ್‍ನ ಮಾಲೀಕತ್ವ ವಹಿಸಿರುವ ಅವಿಡ್ ಲೈಫ್ ಮೀಡಿಯಾ ಕಂಪನಿಯು, ವೆಬ್‍ಸೈಟ್ ಹ್ಯಾಕ್ ಆಗಿರುವುದು

ಎಷ್ಟು ಮಂದಿ ಭಾರತೀಯರ ಮೇಲೆ ಪರಿಣಾಮ ಬೀರಬಹುದು ಅಥವಾ ಯಾರೆಲ್ಲ ತಮ್ಮ ಖಾತೆಗಳನ್ನು ಡಿಲೀಟ್ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದೆ. ಆದರೆ, 2.75 ಲಕ್ಷಕ್ಕೂ ಅಧಿಕ ಭಾರತೀಯರು ಈ ಸೈಟ್‍ನ ಗ್ರಾಹಕರಾಗಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.

2014ರ ಜನವರಿಯಲ್ಲಿ ಸೈಟ್ ಆರಂಭವಾದ ಕೆಲವೇ ದಿನಗಳಲ್ಲಿ ಯಾವುದೇ ಮಾರ್ಕೆಟಿಂಗ್ ತಂತ್ರವಿಲ್ಲದೇ 2.75 ಲಕ್ಷ ಭಾರತೀಯರು ಸೈಟ್‍ನ ಲಾಭ ಪಡೆದುಕೊಂಡಿದ್ದಾರೆ. ಇದರಿಂದ ಪ್ರೇರಣೆಗೊಳಗಾಗಿದ್ದ ಕಂಪನಿಯು ಹಿಂದಿ ವರ್ಶನ್ ಅನ್ನೂ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಅಮೆರಿಕ ಮತ್ತು ಕೆನಡಾದಲ್ಲಿ ಈ ಸೈಟ್ ಜನಪ್ರಿಯತೆ ಪಡೆದಿದ್ದರೆ, ಸಿಂಗಾಪುರದಲ್ಲಿ ಇದನ್ನು ನಿಷೇಧಿಸಲಾಗಿದೆ.

ಹ್ಯಾಕರ್‍ಗಳ ಬೇಡಿಕೆಯೇನು?: ಪ್ರೋಫೈಲ್‍ಗಳನ್ನು ಡಿಲೀಟ್ ಮಾಡಲಿಚ್ಛಿಸುವ ಗ್ರಾಹಕರಿಗೆ ಶುಲ್ಕ ವಿಧಿಸುವಂತಹ ಸೈಟ್‍ನ ನಿಯಮಾವಳಿ ಹ್ಯಾಕರ್‍ಗಳ ಕೋಪಕ್ಕೆ ಕಾರಣವಾಗಿದೆ. ಹಣ ಪಾವತಿಸಿದ ಬಳಿಕವೂ ಗ್ರಾಹಕರ ಮಾಹಿತಿಯನ್ನು ಡಿಲೀಟ್ ಮಾಡಲಾಗುವುದಿಲ್ಲ. ಕ್ರೆಡಿಟ್ಕಾರ್ಡ್ ಮೂಲಕ ಹಣ ಪಾವತಿಸುವ  ಗ್ರಾಹಕರ ಹೆಸರು, ವಿಳಾಸ ಎಲ್ಲ ವನ್ನೂ ಹಾಗೆಯೇ ಉಳಿಸಲಾಗುತ್ತದೆ. ಅಷ್ಟೇ ಅಲ್ಲ, ಗ್ರಾಹಕರ ಲೈಂಗಿಕ ಅತಿರೇಕಗಳಂತಹ ಮುಜುಗರ ತರುವ ವಿವರಗಳೂ ಸೈಟ್‍ನಲ್ಲೇ ಉಳಿಯುತ್ತವೆ ಎಂದು ಹ್ಯಾಕರ್ ಗಳು ಆರೋಪಿಸಿದ್ದಾರೆ.

ಈ ಎಲ್ಲ ಕಾರಣಗಳಿಂದ ಸೈಟ್ ಅನ್ನೇ ಶಟ್ ಡೌನ್ ಮಾಡಬೇಕೆಂದು ಆಗ್ರಹಿಸಿರುವ ಹ್ಯಾಕರ್‍ಗಳು, ಇಲ್ಲದಿದ್ದರೆ  ಎಲ್ಲರ ವಿವರ ಬಹಿರಂಗಗೊಳಿಸಲಾಗುವುದು ಎಂದು ಎಚ್ಚರಿಸಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಇದೇ ವೇಳೆ, ಬಹಿರಂಗಗೊಂಡ ಗ್ರಾಹಕರ ವಿವರಗಳನ್ನು ನಮ್ಮ ತಂಡ  ತೆಗೆದುಹಾಕಿದೆ ಎಂದು ಅವಿಡ್ ಲೈಫ್ ಮೀಡಿಯಾ ಸ್ಪಷ್ಟಪಡಿಸಿರುವುದಾಗಿ ಮತ್ತೊಂದು ಪತ್ರಿಕೆ ವರದಿ ಮಾಡಿದೆ.

ಆಶ್ಲೆ ಮ್ಯಾಡಿಸನ್ ಏನು ಎತ್ತ?

* ಆಶ್ಲೆ ಮ್ಯಾಡಿಸನ್ ಭಾರತದಲ್ಲಿ ಆರಂಭವಾಗಿದ್ದು – 2014ರ ಜನವರಿ

* ಈ ವೆಬ್‍ಸೈಟ್‍ನ ಮೂಲ – ಕೆನಡಾ

* ವೆಬ್‍ಸೈಟ್‍ನ ಮಾಲೀಕರು ಯಾರು? – ಅವಿಡ್ ಲೈಫ್ ಮೀಡಿಯಾ

* ಸಿಂಗಾಪುರದಲ್ಲಿ ಆಶ್ಲೆ ಸೈಟ್‍ಗೆ ನಿಷೇಧ

ಆಕ್ರೋಶಕ್ಕೆ ಕಾರಣವೇನು?

ಗ್ರಾಹಕರು ತಮ್ಮ ಪ್ರೋಫೈಲ್‍ಗಳನ್ನು ಡಿಲೀಟ್ ಮಾಡಲು ಬಯಸಿದರೂ, ಅದಕ್ಕೆ 19 ಡಾಲರ್ ಪಾವತಿಸುವಂತೆ ವೆಬ್‍ಸೈಟ್ ಆದೇಶಿಸುತ್ತದೆ. ಆದರೆ, ಹಣ ಪಾವತಿಸಿದ

ಮೇಲೂ ಪ್ರೋಫೈಲ್ ವಿವರಗಳನ್ನು ತೆಗೆದುಹಾಕುತ್ತಿಲ್ಲ. ಇದುವೇ ಹ್ಯಾಕರ್‍ಗಳ ಆಕ್ರೋಶಕ್ಕೆ ಕಾರಣ.

Write A Comment