ಅಂತರಾಷ್ಟ್ರೀಯ

ಚಲಿಸುತ್ತಿರುವ ಕಾರಿನಲ್ಲಿ ಹೆರಿಗೆ; ವಿಡಿಯೋ ಮಾಡಿದ ಗಂಡ

Pinterest LinkedIn Tumblr

womenಹೂಸ್ಟನ್: ಗರ್ಭಿಣಿ ಮಹಿಳೆಯರು ಪ್ರಯಾಣಿಸುವ ವೇಳೆ ಬಸ್ ನಲ್ಲಿ ಹೆರಿಗೆಯಾಗಿರುವ ಪ್ರಕರಣಗಳನ್ನು ಕೇಳಿದ್ದೀರಿ, ಇಂಥದ್ದೇ ಪ್ರಕರಣ ಅಮೆರಿಕಾದ ಹೂಸ್ಟನ್ ನಲ್ಲಿ ನಡೆದಿದ್ದು ಮಹಿಳೆಯೊಬ್ಬರು ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಕಾರ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಮಾರ್ಗದ ಮಧ್ಯದಲ್ಲಿ ಹೆರಿಗೆ ನೋವು ತೀವ್ರಗೊಂಡು ಚಲಿಸುತ್ತಿದ್ದ ಕಾರಿನಲ್ಲೇ ಲೀಸಾ ಜಾನ್ ಎಂಬುವವರು ಮಗುವನ್ನು ಹಡೆದಿದ್ದಾರೆ. ಗೋ ಪ್ರೋ ಕ್ಯಾಮೆರಾ ಮೂಲಕ ಲೀಸಾ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯವನ್ನು ಸೆರೆ ಹಿಡಿದು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ.

ಲೀಸಾ ಹಾಗೂ ಜಾನ್ ದಂಪತಿಗಳಿಗೆ ಇದು ಮೂರನೇ ಮಗುವಾಗಿದ್ದು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕಾರಿನಲ್ಲಿ ಹೆರಿಗೆಯಾದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಗು ಆರೋಗ್ಯವಾಗಿದ್ದು 4 .5 ಕೆ.ಜಿ ತೂಕವಿದೆ ಎಂದು ವೈದ್ಯರು ತಿಳಿಸಿದ್ದಾರೆ.

Write A Comment