ರಾಷ್ಟ್ರೀಯ

ಈರುಳ್ಳಿ ಹೂವಿನ ಮೊಟ್ಟೆ ಪಲ್ಯ

Pinterest LinkedIn Tumblr

spring-onion-with-Egg-curryಬೇಕಾಗುವ ಸಾಮಾಗ್ರಿಗಳು

ತೆಂಗಿನಕಾಯಿ- ಅರ್ಧ ಹೋಳು
ಶುಂಠಿ -ಸ್ವಲ್ಪ
ಬೆಳ್ಳುಳ್ಳಿ- ಸ್ವಲ್ಪ
ಈರುಳ್ಳಿ- 4
ಚಕ್ಕೆ- ಸ್ವಲ್ಪ
ಲವಂಗ- 6
ಗಸಗಸೆ- ಸ್ವಲ್ಪ
ಟೊಮೆಟೋ- 1
ಕೊತ್ತಂಬರಿ ಸೊಪ್ಪು- ಸ್ವಲ್ಪ
ಹಸಿಮೆಣಸಿನಕಾಯಿ – 6-8
ದನಿಯಾ ಪುಡಿ – ಅರ್ಧ ಚಮಚ
ಈರುಳ್ಳಿ ಹೂವು – 1 ಕಟ್ಟು
ಉಪ್ಪು- ರುಚಿಗೆ ತಕ್ಕಷ್ಟು
ಮೊಟ್ಟೆ- 6

ಮಾಡುವ ವಿಧಾನ

ಮೊದಲು ಈರುಳ್ಳಿ ಹೂವನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. 3 ಈರುಳ್ಳಿಯನ್ನು ಕತ್ತರಿಸಿಕೊಳ್ಳಬೇಕು.
ನಂತರ ತೆಂಗಿನಕಾಯಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ-1, ಚಕ್ಕೆ, ಲವಂಗ, ಗಸಗಸೆ, ಟೊಮೆಟೋ, ಹಸಿಮೆಣಸಿನಕಾಯಿ ಹಾಗೂ ದನಿಯಾ ಪುಡಿಯೆಲ್ಲವನ್ನು ಜಾರ್ ಗೆ ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಈಗ ಮಸಾಲೆ ತಯಾರಾಗುತ್ತದೆ.
ಬಾಣಲೆಯನ್ನು ಒಲೆಯ ಮೇಲಿಟ್ಟು, ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿಟ್ಟುಕೊಂಡ ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ, ಸ್ವಲ್ಪ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10-15 ನಿಮಿಷ ಬೇಯಲು ಬಿಡಬೇಕು.
ನಂತರ ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ ಹೂವನ್ನು ಹಾಕಿ ಮತ್ತೆ 5-10 ನಿಮಿಷ ಬೇಯಿಸಬೇಕು. ಮಸಾಲೆ ಹಾಗೂ ಈರುಳ್ಳಿ ಹೂವು ಬೆಂದ ನಂತರ ಮೊಟ್ಟೆಯನ್ನು ಹೊಡೆದು ಹಾಕಿ ಚೆನ್ನಾಗಿ ಕೈಯಾಡಿಬೇಕು. ಹಸಿ ವಾಸನೆ ಹೋಗುವವರೆಗೂ ಬೇಯಲು ಬಿಡಬೇಕು. ನಂತರ ಒಂದು ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ಈರುಳ್ಳಿ ಹೂವಿನ ಮೊಟ್ಟೆ ಪಲ್ಯ ತಿನ್ನಲು ತಯಾರಾಗುತ್ತದೆ.

-ಮಂಜುಳ.ವಿ.ಎನ್

Write A Comment