ಕರ್ನಾಟಕ

ಮಂಗಳೂರು ಬನ್ಸ್ ಅಥವಾ ಬಾಳೆಹಣ್ಣಿನ ಪೂರಿ

Pinterest LinkedIn Tumblr

mng-bunಬೇಕಾಗುವ ಪದಾರ್ಥಗಳು

ಮೈದಾ ಹಿಟ್ಟು- 1ಕಪ್
ಬಾಳೆಹಣ್ಣು- 1
ಸಕ್ಕರೆ- ಅರ್ಧ ಕಪ್
ಮೊಸರು- 2 ಚಮಚ
ಜೀರಿಗೆ- ಸ್ವಲ್ಪ
ಅಡುಗೆ ಸೋಡಾ- ಅರ್ಧ ಚಮಚ
ಉಪ್ಪು- ಸ್ವಲ್ಪ
ಕರಿಯಲು ಅಡುಗೆ ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಸ್ಮಾಶ್ ಮಾಡಿ. ಅದಕ್ಕೆ ಮೈದಾ ಹಿಟ್ಟು, ಪುಡಿ ಮಾಡಿದ ಸಕ್ಕರೆ, ಉಪ್ಪು,ಹಾಕಿ ಮಿಕ್ಸ್ ಮಾಡಿ.
ನಂತರ ಅದಕ್ಕೆ ಅಡುಗೆ ಸೋಡಾ, ಜೀರಿಗೆ ಹಾಕಿ ಮೊಸರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ 4ರಿಂದ 5 ಗಂಟೆ ನೆನೆಯಲು ಬಿಡಿ.
ಸ್ಟವ್ ಹಚ್ಚಿ ಬಾಣಲೆಗೆ ಎಣ್ಣೆ ಬಿಟ್ಟು, ಎಣ್ಣೆ ಕಾದ ಮೇಲೆ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಪೂರಿ ಆಕಾರಕ್ಕೆ ಒತ್ತಿಕೊಳ್ಳಿ.
ಆಮೇಲೆ ಕಾದ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೂ ಬೇಯಿಸಿ. ನಂತರ ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ತಿನ್ನಬಹುದು.

Write A Comment