ರಾಷ್ಟ್ರೀಯ

5 ಸೆಕೆಂಡುಗಳಲ್ಲಿ ಮಾರಾಟವಾಗಿದ್ದು 45 ಸಾವಿರ ಮೊಬೈಲುಗಳು

Pinterest LinkedIn Tumblr

5883lenovo-k3-noteಲೆನೋವಾ ಕೆ3 ನೋಟ್ ಸ್ಮಾರ್ಟ್ ಫೋನ್ ಹೊಸ ದಾಖಲೆಯನ್ನೇ ಮಾಡಿದೆ. ಫ್ಲಾಶ್ ಸೇಲ್ ಆರಂಭಗೊಂಡ ಕೇವಲ 5 ಸೆಕೆಂಡುಗಳಲ್ಲಿ 45 ಸಾವಿರ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿವೆ.

ಇದನ್ನು ಲೆನೋವಾ ಇಂಡಿಯಾದ ಅಧಿಕೃತ ಟ್ವಿಟ್ಟರ್ ಪೇಜಿನಲ್ಲಿ ಪ್ರಕಟಿಸಲಾಗಿದ್ದು, 27 ಸಾವಿರ ಕಪ್ಪು ಬಣ್ಣದ ಲೆನೋವಾ ಕೆ3 ನೋಟ್ ಸ್ಮಾರ್ಟ್ ಫೋನ್ ಗಳು 2.7 ಸೆಕೆಂಡುಗಳಲ್ಲಿ ಹಾಗೂ 18 ಸಾವಿರ ಬಿಳಿ ಬಣ್ಣದ ಲೆನೋವಾ ಕೆ3 ನೋಟ್ ಸ್ಮಾರ್ಟ್ ಫೋನ್ ಗಳು 2.3 ಸೆಕೆಂಡುಗಳಲ್ಲಿ ಮಾರಾಟವಾಗಿದೆ ಎಂದು ಹೇಳಿದೆ.

ಸುಮಾರು 50 ಲಕ್ಷ ಮಂದಿ ಲೆನೋವಾದ ಅಧಿಕೃತ ವೆಬ್ ಸೈಟ್ ನಲ್ಲಿ ರಿಜಿಸ್ಟೇಶನ್ ಮಾಡಿದ್ದರೆನ್ನಲಾಗಿದ್ದು, ನಿರಾಸೆಗೊಂಡವರಿಗೆ ಇಂದು ಸಂಜೆ 6 ಗಂಟೆಯಿಂದ ಫ್ಲಿಪ್ ಕಾರ್ಟ್ ನಲ್ಲಿ ಫ್ಲಾಶ್ ಸೇಲ್ ಆರಂಭವಾಗಲಿದೆ ಎಂದು ಹೇಳಲಾಗಿದೆ.

Write A Comment