ಅಂತರಾಷ್ಟ್ರೀಯ

ಗಗನ ಸಖಿಯರನ್ನು ಕಾಡ್ತಿದೆ ಒಂದು ಸಮಸ್ಯೆ

Pinterest LinkedIn Tumblr

5247air-hostess-dressಗಗನ ಸಖಿಯರ ಕೆಲಸ ಗ್ಲಾಮರಸ್ ಅಂತಾ ನಾವೆಲ್ಲ ನಂಬಿದ್ದೇವೆ. ಆದರೆ ಇದೇ ಗ್ಲಾಮರ್, ಗಗನ ಸಖಿಯರಿಗೆ ಸಮಸ್ಯೆ ತಂದೊಡ್ಡಿದೆ.

ಜಪಾನ್, ಯುಕೆ, ಜರ್ಮನಿ ಸೇರಿದಂತೆ ಅನೇಕ ದೇಶಗಳ ಸರ್ಕಾರಿ ಮತ್ತು ಖಾಸಗಿ ವಿಮಾನ ಕಂಪನಿಯಲ್ಲಿ ಕೆಲಸ ಮಾಡುವ ಗಗನ ಸಖಿಯರು ಗ್ಲಾಮರ್ ಡ್ರೆಸ್ ವಿರುದ್ಧ ದನಿ ಎತ್ತಿದ್ದಾರೆ. ಗ್ಲಾಮರ್ ಡ್ರೆಸ್ ತೊಟ್ಟು ಕೆಲಸ ಮಾಡುವುದು ಕಷ್ಟ ಎನ್ನುವ ಗಗನಸಖಿಯರು, ಇದು ಅತಿ ಚಿಕ್ಕದು ಮತ್ತು ಮೈಗೆ ಅಂಟಿಕೊಂಡಿರುವುದರಿಂದ ಹಾಯಾಗಿ ಕೆಲಸ ಮಾಡಲು ಅಸಾಧ್ಯ ಎನ್ನುತ್ತಾರೆ.

ಗಗನ ಸಖಿಯರ ಡ್ರೆಸ್ ತುಂಬಾ ಸ್ಟೈಲಿಶ್ ಆಗಿದೆ. ಆದರೆ ಕಂಪರ್ಟೇಬಲ್ ಅಲ್ಲ ಎನ್ನುತ್ತಾರೆ ಗಗನ ಸಖಿಯರು. ಒಂದೊಂದು ಕಂಪನಿ ಒಂದೊಂದು ಡ್ರೆಸ್ ಕೋಡ್ ಹೊಂದಿದೆ. ಕೆಲವು ಕಂಪನಿಯಲ್ಲಿ ಗಗನ ಸಖಿಯರು ಪ್ಯಾಂಟ್ ಧರಿಸುವಂತಿಲ್ಲ. ಸ್ಕರ್ಟ್ ಹಾಗೂ ಹೀಲ್ಡ್ ಧರಿಸುವ ಗಗನಸಖಿಯರಿಗೆ ತುರ್ತು ಸಂದರ್ಭದಲ್ಲಿ ಕೆಲಸ ಮಾಡುವುದು ಅಸಾಧ್ಯವಂತೆ. ಹಾಗಾಗಿ ಉಡುಪು ಬದಲಿಸಿ ಎಂಬ ಕೋರಿಕೆ ಅವರದ್ದು.

Write A Comment