ಅಂತರಾಷ್ಟ್ರೀಯ

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವನೆ ಮಾಡಿದ್ರೆ ನಿದ್ರಾಹೀನತೆ, ಆತಂಕ, ಮುಂಗೋಪ, ಕಬ್ಬಿಣದ ಅಂಶ ಕಡಿಮೆ

Pinterest LinkedIn Tumblr

6600Green-Tea-2ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಈ ವಿಚಾರ ಎಲ್ಲರಿಗೂ ತಿಳಿದಿದೆ. ಹಾಗಾಗೇ ಅನೇಕರು ಗ್ರೀನ್ ಟೀ ಕುಡಿಯೋದನ್ನು ರೂಢಿಸಿಕೊಂಡಿದ್ದಾರೆ. ಆದರೆ ಅತಿಯಾದ್ರೆ ಅಮೃತವೂ ವಿಷ ಎಂಬ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ.

ಪ್ರತಿ ದಿನ ಗ್ರೀನ್ ಟೀ ಕುಡಿಯೋದ್ರಿಂದ ತೂಕ ಕಡಿಮೆಯಾಗುತ್ತೆ. ಚರ್ಮದ ಸೌಂದರ್ಯ ಹೆಚ್ಚಾಗುವುದಲ್ಲದೇ, ಜೀರ್ಣಕ್ರಿಯೆ ಸುಲಭ. ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ಮೂತ್ರಪಿಂಡ, ಹೃದಯ ರೋಗ ಮತ್ತು ಅನಿಯಮಿತ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಆದರೆ ಸರಿಯಾದ ಸಮಯದಲ್ಲಿ ಗ್ರೀನ್ ಟೀ ಸೇವಿಸಿದರೆ ಮಾತ್ರ ಇದೆಲ್ಲ ಸಾಧ್ಯ.

ಗ್ರೀನ್ ಟೀಯಲ್ಲಿ ಕೆಫಿನ್ ಅಂಶ ಕಡಿಮೆ ಇದೆ. ಆದರೂ ಇದು ನಿದ್ರಾಹೀನತೆ, ಆತಂಕ, ಮುಂಗೋಪ, ಕಬ್ಬಿಣದ ಅಂಶವನ್ನು ಕಡಿಮೆ ಮಾಡುತ್ತದೆ. ಮಾಹಿತಿ ಪ್ರಕಾರ ದಿನದಲ್ಲಿ 2-3 ಬಾರಿ ಮಾತ್ರ ಗ್ರೀನ್ ಟೀ ಸೇವಿಸಬೇಕು. ಇದಕ್ಕಿಂತ ಜಾಸ್ತಿ ಸೇವನೆ ಮಾಡಿದರೆ ಅಪಾಯ ಗ್ಯಾರಂಟಿ.

ಅದರಲ್ಲಿ ಸ್ವಲ್ಪವೇ ಕೆಫಿನ್ ಅಂಶವಿದ್ದರೂ ಇದು ಗರ್ಭಿಣಿಯರಿಗೆ ಒಳ್ಳೆಯದಲ್ಲ. ಗರ್ಭ ಧರಿಸಿದವರು ಯಾವುದೇ ಕಾರಣಕ್ಕೂ ಗ್ರೀನ್ ಟೀ ಸೇವಿಸಬಾರದು. ಗ್ರೀನ್ ಟೀಯನ್ನು ಒಂದು ತಾಸಿಗೂ ಮುನ್ನವೇ ಸೇವಿಸಬೇಕು. ಅದನ್ನು ತುಂಬಾ ಹೊತ್ತು ಇಟ್ಟರೆ ಅದರಲ್ಲಿರುವ ವಿಟಮಿನ್ ಕಡಿಮೆಯಾಗುವುದಲ್ಲದೇ, ಬ್ಯಾಕ್ಟೀರಿಯಾ ಬೆಳೆಯಲು ಶುರುವಾಗುತ್ತದೆ.

ತೂಕ ಕಡಿಮೆ ಮಾಡುವ ಉದ್ದೇಶದಿಂದ ಅನೇಕರು ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಎಸಿಡಿಟಿಗೆ ಕಾರಣವಾಗಬಹುದು. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವುದು ಒಳ್ಳೆಯದು.

ಊಟವಾದ ತಕ್ಷಣ ಗ್ರೀನ್ ಟೀ ಕುಡಿಯುವುದನ್ನು ನಿಲ್ಲಿಸಿ. ತಡರಾತ್ರಿ ಅಥವಾ ಮಲಗುವ ಕೆಲವೇ ಸಮಯದ ಮೊದಲು ಗ್ರೀನ್ ಟೀ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದೇ ಔಷಧಿ ಕುಡಿದ ನಂತರ ಗ್ರೀನ್ ಟೀ ಕುಡಿಯುವ ಚಟವಿದ್ದರೆ ಬಿಟ್ಟು ಬಿಡಿ. ನೀರಿನಲ್ಲಿ ಗ್ರೀನ್ ಟೀ ಪುಡಿ ಹಾಕಿ ಕುದಿಸಬೇಡಿ. ಕುದ್ದಿರುವ ನೀರಿಗೆ ಪುಡಿ ಅಥವಾ ಚೀಲವನ್ನು ಹಾಕಿ, 2 ನಿಮಿಷ ಬಿಟ್ಟು ಕುಡಿಯಿರಿ. ಗ್ರೀನ್ ಟೀಯಿಂದ ಅನೇಕ ಪ್ರಯೋಜನಗಳಿವೆ. ಆದರೆ ನಿಯಮ ಪ್ರಕಾರ ಅದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.

Write A Comment