ರಾಷ್ಟ್ರೀಯ

ವೈದ್ಯಕೀಯ ಲೋಕಕ್ಕೆ ಸವಾಲು : ಎರಡು ಮಕ್ಕಳಿಗೆ ಒಂದೇ ಲಿವರ್ !

Pinterest LinkedIn Tumblr

4120ಪ್ರಕೃತಿ ಎಂಬುದು ವಿಸ್ಮಯ. ಇಲ್ಲಿ ನಡೆಯುವ ಕೆಲ ಬೆಳವಣಿಗೆಗಳು ವೈದ್ಯಕೀಯ ಲೋಕಕ್ಕೇ ಸವಾಲಾಗಿರುತ್ತವೆ. ಇದಕ್ಕೆ ಜ್ವಲಂತ ಉದಾಹರಣೆ ಎಂಬಂತೆ ರಾಜಸ್ಥಾನದ ಜೋಧ್ ಪುರ ದಲ್ಲಿ ಸಯಾಮಿ ಅವಳಿ ಮಕ್ಕಳು ಒಂದೇ ಲಿವರ್ ನಲ್ಲಿ ಜನಿಸಿ ಅಚ್ಚರಿಗೆ ಕಾರಣವಾಗಿದೆ.

ಹೌದು. ಇಲ್ಲಿನ ಉಮೇದ್ ಆಸ್ಪತ್ರೆಯಲ್ಲಿ ಸೀತಾ ಬವರಿ ಎಂಬ ಮಹಿಳೆಗೆ ಈ ಜೂನ್ 30 ರಂದು ಈ ಸಯಾಮಿ ಮಗು ಜನಿಸಿದ್ದು ಈ ಸಯಾಮಿಗಳಿಗೆ ಒಂದೇ ಲಿವರ್ ಇದ್ದು ಇದನ್ನು ಬೇರ್ಪಡಿಸಲು ಕನಿಷ್ಠ ಹತ್ತು ಲಕ್ಷ ರೂಪಾಯಿಗಳು ಬೇಕು ಮಾತ್ರವಲ್ಲ, ಹೆಚ್ಚು ದಿನ ಮಗು ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹಾಗಾಗಿ ಅವಳಿ ಮಕ್ಕಳ ಜನನದಿಂದ ಸಂತಸಗೊಂಡಿದ್ದ ತಂದೆ ತಾಯಿಗೆ ಮಕ್ಕಳ ಪೋಷಣೆ ಕಷ್ಟವಾಗಿದ್ದರಿಂದ ಇದೀಗ ನಿರಾಶೆಯಾಗಿದೆ.

Write A Comment