ರಾಷ್ಟ್ರೀಯ

ಕಲ್ಲಿದ್ದಲು ಪ್ರಕರಣದ ಆರೋಪಿಗೆ ವೀಸಾ ನೀಡಲು ಕಾಂಗ್ರೆಸ್ ನಾಯಕನ ಒತ್ತಡ; ಟ್ವಿಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ಬಾಂಬ್ ಸಿಡಿಸಿದ ಸುಷ್ಮಾ

Pinterest LinkedIn Tumblr

sushma-ssswaraj

ನವದೆಹಲಿ: ವಿದೇಶಾಂಗದ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ವಿರುದ್ಧದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಟ್ವಿಟರ್ ನಲ್ಲಿ ಕಾಂಗ್ರೆಸ್ ಹಿರಿಯ ನಾಯಕರೊಬ್ಬರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಬಹುಕೋಟಿ ಕಲ್ಲಿದ್ದಲು ಹಗರಣದ ಪ್ರಮುಖ ಆರೋಪಿ ಸಂತೋಷ್ ಬರ್ಗೋಡಿಯಾಗೆ ತುರ್ತು ಪಾಸ್ ಪೋರ್ಟ್ ನೀಡಲು ಕಾಂಗ್ರೆಸ್ ಹಿರಿಯನಾಯಕರೊಬ್ಬರು ಒತ್ತಡ ಹೇರಿದ್ದರು ಎಂದು ಸುಷ್ಮಾ ಟ್ವಿಟರ್ ನಲ್ಲಿ ಬರೆದಿದ್ದಾರೆ.

ಬರ್ಗೋಡಿಯಾಗೆ ರಾಜತಾಂತ್ರಿಕ ಪಾಸ್ ಪೋರ್ಟ್ ನೀಡುವಂತೆ ಒತ್ತಡ ಹೇರಿದ್ದ ಕಾಂಗ್ರೆಸ್ ಹಿರಿಯ ನಾಯಕನ ಹೆಸರನ್ನಾ ಇಂದು ಸದನದಲ್ಲಿ ಬಹಿರಂಗಪಡಿಸುವೆ ಎಂದು ಸುಷ್ಮಾ ಹೇಳಿದ್ದಾರೆ.

ಸುಷ್ಮಾ ಸ್ವರಾಜ್ ವಿರುದ್ಧ ಸಂಸತ್ ನಲ್ಲಿ ಮಾತುಗಳು ಕೇಳಿಬಂದಿರುವುದರ ಜೊತೆಗೆ, ಸುಷ್ಮಾ ರಾಜಿನಾಮೆಗೆ ಪ್ರತಿಪಕ್ಷಗಳು ಆಗ್ರಹಿಸಿದ್ದವು. ಸುಷ್ಮಾ ಲಲಿತ್ ಮೋದಿಗೆ ಪಾಸ್ ಪೋರ್ಟ್ ಕೊಡಿಸುವುದರಲ್ಲಿ ಸುಷ್ಮಾ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು. ಅದೇ ರೀತಿಯಲ್ಲಿ ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ಸುಷ್ಮಾ ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಚಿವೆ ಸುಷ್ಮಾ ಸ್ವರಾಜ್ ‘ನಾನು ಆ ನಾಯಕನ ಹೆಸರನ್ನು ಸದನದಲ್ಲೇ ಬಯಲ ಮಾಡುತ್ತೇನೆ, ಕಲ್ಲಿದ್ದಲು ಹಗರಣದ ಪ್ರಮುಖ ಆರೋಪಿ ಸಂತೋಷ್ ಬರ್ಗೋಡಿಯಾಗೆ ಪಾಸ್ ಪೋರ್ಟ್ ನೀಡಲು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ನನಗೆ ಒತ್ತಡ ಹೇರಿದ್ದರು” ಎಂದು ಟ್ವೀಟ್ ಮಾಡಿದ್ದಾರೆ.

ಸುಷ್ಮಾ ಟ್ವೀಟ್ ಗೆ ಪ್ರತಿಕ್ರಯಿಸಿರುವ ಕಾಂಗ್ರೆಸ್ ನಾಯಕರು, ಇಂತಹ ಬ್ಲಾಕ್ ಮೇಲ್ ಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ತಮ್ಮ ಆರೋಪಗಳಿಂದ ತಪ್ಪಿಸಿಕೊಳ್ಳಲು ಸುಷ್ಮಾ ಈ ರೀತಿ ಟ್ವೀಟ್ ಮಾಡಿದ್ದಾರೆ. ಸುಷ್ಮಾ ಸ್ವರಾಜ್ ದೇಶ ಭ್ರಷ್ಟನಿಗೆ ವಿಸಾ ಸಹಾಯ ಮಾಡಿದ್ದಾರೆ. ದೇಶದ ಬಗ್ಗೆ ಕಾಳಜಿ ಇದ್ದವರು ಹೀಗೆ ಮಾಡಲು ಸಾಧ್ಯವಿಲ್ಲ. ನಮ್ಮ ಪ್ರಶ್ನೆಗಳಿಗೆ ಸುಷ್ಮಾ ಸ್ವರಾಜ್ ಉತ್ತರಿಸಲೇಬೇಕು. ಇಂತಹ ಗೊಡ್ಡು ಬೆದರಿಕೆ ಹೆದರಲ್ಲ ಎಂದು ಹೇಳಿದ್ದಾರೆ.

Write A Comment