ಅಂತರಾಷ್ಟ್ರೀಯ

ಮೇಕ್ ಇನ್ ಇಂಡಿಯಾ: ರಷ್ಯಾ ಸಹಯೋಗದಲ್ಲಿ 200 ಹೆಲಿಕಾಪ್ಟರ್ ತಯಾರಿಕೆ

Pinterest LinkedIn Tumblr

Helicopter

ಮಾಸ್ಕೊ: ರಷ್ಯಾ ಸಹಯೋಗದಲ್ಲಿ ಭಾರತ 200 ಮಿಲಿಟರಿ ಹೆಲಿಕಾಪ್ಟರ್ ಗಳನ್ನು ದೇಶದಲ್ಲೇ ತಯಾರಿಸಲಿದ್ದು, ರಕ್ಷಣಾ ವಲಯವನ್ನು ಮತ್ತಷ್ಟು ಬಲಗೊಳ್ಳಲಿದೆ.

ಮೇಕ್ ಇನ್ ಇಂಡಿಯಾ ಮೂಲಕ ಭಾರತದಲ್ಲೇ ತಯಾರಿಸಿ ರಕ್ಷಣಾ ಯೋಜನೆಗಳನ್ನು ರಷ್ಯಾದ ಸಹಯೋಗದಲ್ಲಿ ಕೈಗೊಳ್ಳಲು ಉಭಯ ದೇಶಗಳ ಮಧ್ಯೆ ಈಚೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಷ್ಯಾದಲ್ಲಿರುವ ಭಾರತದ ರಾಯಭಾರಿ ಪಿ.ಎಸ್. ರಾಘವನ್ ಹೇಳಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಈ ಒಪ್ಪಂದ ಪೂರಕವಾಗಿದೆ. ಜಂಟಿ ಸಹಯೋಗದಲ್ಲಿ ಹೆಲಿಕಾಪ್ಟರ್ ನಿರ್ಮಾಣಕ್ಕೆ ಎರಡು ರಾಷ್ಟ್ರಗಳು ಈಚೆಗೆ ಒಪ್ಪಂದ ಮಾಡಿಕೊಂಡಿವೆ. ಇದೊಂದು ಮಹತ್ವದ ಹಾಗೂ ಬೃಹತ್ ಹೆಜ್ಜೆಯಾಗಿದ್ದು, ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ರಕ್ಷಣಾ ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ಪ್ರಥಮ ಯೋಜನೆ ಇದಾಗಿದೆ ಎಂದು ಅವರು ಹೇಳಿದ್ದಾರೆ.

Write A Comment