ರಾಷ್ಟ್ರೀಯ

ಕಿಶನ್‌ಜೀಯನ್ನು ಕೊಂದಿದ್ದು ಮಮತಾ ಸರಕಾರ: ಮಮತಾ ಬ್ಯಾನರ್ಜಿ ಸೋದರಳಿಯ, ಸಂಸದ ಅಭಿಷೇಕ್ ಬ್ಯಾನರ್ಜಿ

Pinterest LinkedIn Tumblr

abhishekt-banarjeeಕೋಲ್ಕತ್ತಾ: ‘ಸರಕಾರವೇ ಕಿಶನ್‌ಜೀಯನ್ನು ಕೊಂದಿದ್ದು,’ ಎನ್ನುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ, ಸಂಸದ ಅಭಿಷೇಕ್ ಬ್ಯಾನರ್ಜಿ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.

‘ಮಾವೋವಾದಿ ನಾಯಕ ಕಿಶನ್‌ಜೀ ಮೃತಪಟ್ಟಿದ್ದು ಎನ್‌ಕೌಂಟರ್‌ನಿಂದ’, ಎಂಬ ಮಮತಾ ಹೇಳಿಕೆಗೆ ವ್ಯತಿರಿಕ್ತವಾಗಿ, ಅಭಿಷೇಕ್ ಹೇಳಿಕೆ ನೀಡಿದ್ದಾರೆ.

‘ತೃಣಮೂಲ ಕಾಂಗ್ರೆಸ್‌ನ ನಾಲ್ಕು ವರ್ಷಗಳ ಆಡಳಿತದಲ್ಲಿ ಇದುವರೆಗೆ ಒಬ್ಬನ (ಜಂಗಲ್‌ಮಹಲ್‌ನಲ್ಲಿ ಹತ್ಯೆಯಾದ ಕಿಶನ್‌ಜೀ) ಹೊರತಾಗಿ ಯಾರೂ ಮೃತಪಟ್ಟಿಲ್ಲ. ಕಿಶನ್‌ಜೀಯನ್ನು ಕೊಲ್ಲುವ ಮೂಲಕ ಪ್ರಜಾಪ್ರಭುತ್ವದಲ್ಲಿ ಜನರ ನಿರ್ಣಯವೇ ಅಂತಿಮ ಎಂಬುದನ್ನು ಸಾಬೀತು ಪಡಿಸಿದೆ,’ ಎಂದು ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ಬೇಲ್‌ಪಹರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಭಿಷೇಕ್ ಹೇಳಿದ್ದಾರೆ.

‘ಕಿಶನ್‌ಜೀ ಎನ್‌ಕೌಂಟರ್ ಪೂರ್ವನಿರ್ಧರಿತವಲ್ಲ. ಇದೊಂದು ಆಕಸ್ಮಿಕ. ಸಾವಿನ ಬಗ್ಗೆ ಪೊಲೀಸರಿಗೂ ಸೂಚನೆ ಇರಲಿಲ್ಲ. ಮೊದಲೇ ಗೊತ್ತಿದ್ದರೆ, ದಿಲ್ಲಿಯಲ್ಲಿದ್ದ ನನಗೆ ಹೇಳುತ್ತಿದ್ದರು. ಸಾಮಾನ್ಯ ಪ್ರಜೆಯಾಗಲಿ ಅಥವಾ ಪ್ರತಿಪಕ್ಷದವರೇ ಆಗಲಿ, ಯಾರ ಸಾವನ್ನೂ ಸರಕಾರ ಬಯಸುವುದಿಲ್ಲ. ಆದರೆ, ಈ ಎನ್‌ಕೌಂಟರ್ ದುರಾದೃಷ್ಟ,’ ಎಂದು ಕೊಟೇಶ್ವರ್ ರಾವ್ ಅಲಿಯಾಸ್ ಕಿಶನ್‌ಜೀ ಮೃತಪಟ್ಟ ಕೆಲವು ದಿನಗಳ ನಂತರ ಮಮತಾ ಹೇಳಿದ್ದರು.

ಸಿಪಿಎಂನ ಪಾಲಿಟ್‌ಬ್ಯೂರೋ ಸದಸ್ಯರಾಗಿದ್ದ ಕಿಶನ್‌ಜೀ ನವೆಂಬರ್, 2011ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದರು.

Write A Comment