ರಾಷ್ಟ್ರೀಯ

ಗರ್ಭಿಣಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದವನಿಗೆ 10 ವರ್ಷ ಜೈಲು

Pinterest LinkedIn Tumblr

85010ನವದೆಹಲಿ: ಗರ್ಭಿಣಿಯಾಗಿದ್ದ 19 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ನ್ಯಾಯಾಲಯ 10 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ದೆಹಲಿಯ ಶಾಸ್ತ್ರಿ ನಗರದಲ್ಲಿ ವಾಸವಾಗಿದ್ದ ಬಿಹಾರ್ ಮೂಲದ ಮುನ್ನಾ ಎಂಬಾತನೇ ಶಿಕ್ಷೆಗೊಳಗಾದ ಆರೋಪಿಯಾಗಿದ್ದು, ತನಗೆ ರೈಲು ನಿಲ್ದಾಣದಲ್ಲಿ ಭೇಟಿಯಾಗಿದ್ದ ಉತ್ತರ ಪ್ರದೇಶ ಮೂಲದ ಯುವತಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ತನ್ನ ಬಳಿ ವರ್ಷಗಳ ಕಾಲ ಇರಿಸಿಕೊಂಡಿದ್ದನಲ್ಲದೇ ಪದೇ ಪದೇ ಮೇಲೆ ಆಕೆ ಮೇಲೆ ಅತ್ಯಾಚಾರವೆಸಗಿದ್ದ.

ಇದರ ಪರಿಣಾಮ ಯುವತಿ ಗರ್ಭಿಣಿಯಾಗಿದ್ದು, ಈ ಅವಧಿಯಲ್ಲೂ ಯುವತಿಯ ವಿರೋಧವನ್ನು ಲೆಕ್ಕಿಸದೆ ಮುನ್ನಾ ಅತ್ಯಾಚಾರವೆಸಗಿದ್ದ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಮುನ್ನಾನಿಗೆ 10 ವರ್ಷಗಳ ಕಾಲ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 3 ಸಾವಿರ ರೂ. ಗಳನ್ನು ಪರಿಹಾರದ ರೂಪದಲ್ಲಿ ಯುವತಿಗೆ ನೀಡುವಂತೆ ಆದೇಶಿಸಿದ್ದಾರೆ.

1 Comment

Write A Comment