ಅಂತರಾಷ್ಟ್ರೀಯ

ಕಾಡ್ಗಿಚ್ಚಿಗೆ ಬೆಚ್ಚಿ ಬಿದ್ದ ಅಮೇರಿಕಾ

Pinterest LinkedIn Tumblr

5234brush_fire_071715ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ಅರಣ್ಯಕ್ಕೆ ಬೆಂಕಿ ಬಿದ್ದು ಜನನಿಬಿಡ ರಸ್ತೆವರೆಗೂ ಬೆಂಕಿ ತನ್ನ ಕೆನ್ನಾಲಿಗೆ ಚಾಚಿದ್ದು ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿದ್ದ ಚಾಲಕರು ಭಯದಿಂದ ದಿಕ್ಕಾಪಾಲಾಗಿ ಓಡಿರುವ ಘಟನೆ ನಡೆದಿದೆ.

ಲಾಸ್ ವೇಗಾಸ್ ಮತ್ತು ಕ್ಯಾಲಿಫೋರ್ನಿಯಾದ ರಸ್ತೆಯ ಮೇಲೆ ಕಾಡ್ಗಿಚ್ಚು ಹಬ್ಬಿದ್ದು ಇದರಿಂದ ಭಯಗೊಂಡ ನೂರಾರು ಜನರು ತಮ್ಮ ವಾಹನಗಳನ್ನು ಬಿಟ್ಟು ಓಡಿಹೋಗಿದ್ದಾರೆ. ಅಲ್ಲದೇ ಈ ಘಟನೆಯಿಂದ  ಕಾಡ್ಗಿಚ್ಚಿನ ಆರ್ಭಟಕ್ಕೆ 20ಕ್ಕೂ ಅಧಿಕ ವಾಹನಗಳು ಭಸ್ಮವಾಗಿದ್ದು, ಮೂರುವರೆ ಸಾವಿರ ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದ್ದು ದಟ್ಟವಾದ ಕಪ್ಪು ಹೊಗೆ, ಕಾಣಿಸಿಕೊಂಡಿದ್ದು  ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಕಿಯನ್ನಾರಿಸಲು ಈಗಾಗಲೇ ವಿಮಾನದ ಮೂಲಕ ನೀರನ್ನು ಸುರಿಯಲಾಗುತ್ತಿದ್ದು ಇವೆಲ್ಲದರ ನಡುವೆ ಜನರು ಜೀವ ಉಳಿಸಿಕೊಳ್ಳಲು ಓಡುತ್ತಿರುವ ದೃಶ್ಯವೂ  ಮನಕಳಕುತ್ತಿದೆ . ಅಲ್ಲದೇ ಬೆಂಕಿಯಿಂದಾಗಿ ದಾರಿಯಲ್ಲೇ ಹಲವು ವಾಹನಗಳು ಸುಟ್ಟು ಭಸ್ಮವಾಗಿದ್ದರಿಂದ ಕಿಲೋಮೀಟರ್’ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಘಟನೆಯಲ್ಲಿ ಸಂಭವಿಸಿರುವ ಸಾವು, ನೋವುಗಳ ಕುರಿತು ಇಲ್ಲಿಯವರೆಗೂ ಯಾವುದೇ ಮಾಹಿತಿ ಲಭಿಸಿಲ್ಲ.

Write A Comment